ಲಡಾಕ್‌ನಲ್ಲಿ ಚೀನಾ ನುಸುಳುವಿಕೆ : ಲೇಹ್‌ನಲ್ಲಿ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ಸಭೆ

ದೆಹಲಿ : ಸ್ವಾತಂತ್ರ್ಯೋತ್ಸವದ ದಿನ ಭಾರತದ ಲಡಾಕ್ ಪ್ರದೇಶಕ್ಕೆ ನುಗ್ಗಿದ್ದ ಚೀನಾ ಸೈನಿಕರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿರುವ ಘಟನೆ ಸಂಬಂಧ ಲೇಹ್‌ನಲ್ಲಿ  ಉಭಯ ರಾಷ್ಟ್ರಗಳ ಸೇನಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಗಡಿಯಲ್ಲಿ ಎರಡೂ ರಾಷ್ಟ್ರಗಳು ಶಾಂತಿ ಕಾಪಾಡಲು ಸಹಕಾರ ನೀಡುವ ಕುರಿತು ಸಭೆಯಲ್ಲಿ ಮಾತುಕತೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಲಡಾಕ್‌ನಲ್ಲಿ ಭಾರತದ ಭೂಪ್ರದೇಶಕ್ಕೆ ನುಗ್ಗಲು ಚೀನಾದ ಪೀಪಲ್ ಲಿಬರೇಶನ್‌ ಆರ್ಮಿ ಪ್ರಯತ್ನಿಸಿದ್ದು, ಅವರ ಯತ್ನವನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದರು. ಪ್ಯಾಂಗಾಂಗ್‌ ಸರೋವರದ ಬಳಿ ಚೀನಾ ಸೈನಿಕರು ಭಾರತದ ಭೂಭಾಗದೊಳಗೆ ನುಗ್ಗುವ ಪ್ರಯತ್ನ ಮಾಡಿದ್ದರು. ಆಗ ಅಲ್ಲಿದ್ದ ಭಾರತೀಯ ಯೋಧರು ಚೀನೀಯರನ್ನು ತಡೆದಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ಸೈನಿಕರ ಮಧ್ಯೆ ವಾಗ್ಲಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಚೀನೀಯರ ಮೇಲೆ ಕಲ್ಲು ತೂರಾಟ ನಡೆಸಿ ಹಿಮ್ಮೆಟ್ಟಿಸಿದ್ದರು.
ಅಲ್ಲದೆ ಭಾರತದೊಳಗೆ ನುಸುಳಲು ಯತ್ನಿಸಿದ್ದ ಚೀನಾ ಸೈನಿಕರು ಕಬ್ಬಿಣದ ಸರಳುಗಳು ಹಾಗೂ ಕಲ್ಲುಗಳನ್ನು ಹಿಡಿದಿದ್ದರು. ಇಬ್ಬರ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ದೇಶದ ಸೈನಿಕರಿಗೂ ಸಣ್ಣ ಪ್ರಮಾಣದ ಗಾಯಗಳಾಗಿತ್ತು.

Comments are closed.

Social Media Auto Publish Powered By : XYZScripts.com