WATCH : ಸ್ನೇಹಿತರೊಂದಿಗೆ ಬೈಕ್ ರೇಸ್ ನಲ್ಲಿ ಮೃತಪಟ್ಟ ದೆಹಲಿ ಯುವಕ

24 ವರ್ಷದ ಹುಡುಗನೊಬ್ಬ ಸ್ನೇಹಿತರೊಂದಿಗೆ ಬೈಕ್ ರೇಸ್ ಮಾಡಲು ಹೋಗಿ ಮೃತಪಟ್ಟಿದ್ದಾನೆ. ದೆಹಲಿಯ ಹಿಮಾಂಶು ಬನ್ಸಲ್ ಎಂಬ ಯುವಕ ಸೋಮವಾರ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕ್ ರೇಸ್ ಗಿಳಿದಿದ್ದಾನೆ. ಅತಿಯಾದ ವೇಗದಿಂದ, ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ. ಮಂಡಿ ಹೌಸ್ ಮೆಟ್ರೊ ಸ್ಟೇಶನ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅವನೊಂದಿಗೆ ರೇಸ್ ಮಾಡುತ್ತಿದ್ದ ಇನ್ನೊಬ್ಬ ಯುವಕನ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

benelli tnt 600i accident delhi 650

ಪಾರ್ಟಿಯೊಂದಕ್ಕೆ ತೆರಳಿದ್ದ ಮೂವರು ಯುವಕರು ಮರಳಿ ಬರುವಾಗ ರೇಸ್ ಶುರುವಾಗಿದೆ. ಮೃತಪಟ್ಟಿರುವ ಯುವಕ ಹಿಮಾಂಶು ಬನ್ಸಲ್ ಬೆನೆಲಿ TNT 600i ಬೈಕ್ ಚಲಾಯಿಸುತ್ತಿದ್ದ. ಅವನ ಹಿಂದಿದ್ದ ಇನ್ನೊಬ್ಬ ತನ್ನ ಹೆಲ್ಮೆಟ್ ನಲ್ಲಿ ಆ್ಯಕ್ಷನ್ ಕ್ಯಾಮೆರಾ ಅಳವಡಿಸಿಕೊಂಡು ಇಡೀ ರೇಸನ್ನು ಶೂಟ್ ಮಾಡುತ್ತಿದ್ದ. ಈತ ಕವಾಸಕಿ ನಿಂಜಾ 300 ಬೈಕ್ ಓಡಿಸುತ್ತಿದ್ದ. ಮೂರನೆಯವನು ಕೂಡ ಬೆನೆಲಿ TNT 600i ಬೈಕ್ ಓಡಿಸುತ್ತಿದ್ದ. ಹಿಮಾಂಶು ದೆಹಲಿಯ ವಿವೇಕ ವಿಹಾರದಲ್ಲಿ ನೆಲೆಸಿದ ಉದ್ಯಮಿಯೊಬ್ಬರ ಮಗನಾಗಿದ್ದ.

ಅಪಘಾತದ ವಿಡಿಯೋ ಇಲ್ಲಿದೆ..

Comments are closed.

Social Media Auto Publish Powered By : XYZScripts.com