ನಿಮ್ಮ ಆಟ ಕರ್ನಾಟಕದಲ್ಲಿ ನಡೆಯಲ್ಲ, ತಂತ್ರಗಾರಿಕೆಗೆ ರಾಜ್ಯದ ಜನತೆ ಮರಳಾಗಲ್ಲ : ಪರಮೇಶ್ವರ್

ಬೆಂಗಳೂರು : ನಿನ್ನೆ ರಾಜ್ಯ ಸರ್ಕಾರದ ವಿರುದ್ದ ನೇರಾ ನೇರವಾಗಿ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಟಾಂಗ್ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ನಿಮ್ಮ ಆಟ  ಯುಪಿ ಮತ್ತೆ ಬೇರೆಡೆ ನಡೆದಿರಬಹುದು, ಆದ್ರೆ ನೀವು ಕರ್ನಾಟಕದ ಪಾಲಿಗೆ ಚಾಣಕ್ಯ ಅಲ್ಲ ಎಂದು ಲೇವಡಿ ಮಾಡಿದ್ದಾರೆ.

ನಾವು ಅಭಿವೃದ್ಧಿಯ ಮಾತನ್ನಾಡಿದರೆ, ಬಿಜೆಪಿಯವರು ರಾಜಕೀಯ ಮಾತಾಡ್ತಾರೆ. ನಾವು ಒಗ್ಗಟ್ಟಿನ ಮಂತ್ರ ಜಪಿಸಿದರೇ ಅವರು, ಕೋಮುವಾದದ ಬಗ್ಗೆ ಮಾತಾಡ್ತಾರೆ.ಅಮಿತ್ ಶಾ ರಾಜ್ಯ ಭೇಟಿ ವಿಚಾರ, ರಾಜ್ಯ ಸರ್ಕಾರದ ವಿರುದ್ಧ ಮಾಡಿದ ಆರೋಪ ಸರಿಯಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಹಾಗಾದ್ರೆ ಭ್ರಷ್ಟಾಚಾರದ ಅರ್ಥವನ್ನ ಶಾ ಹೇಳಬೇಕು. ಅಕ್ರಮವಾಗಿ ರಾಜ್ಯದ ಅದಿರು ರಫ್ತು ಮಾಡಿ ಹಣ ಮಾಡಿದ್ದು, ಬಿಜೆಪಿ ಮುಖ್ಯಮಂತ್ರಿಯವರು ಚೆಕ್ ರೂಪದಲ್ಲಿ ಹಣ ಪಡೆದದ್ದು. ಅನೇಕ ಮುಖಂಡರು ಇನ್ನೂ ಕೆಲ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ‌. ಹಾಗಾದ್ರೆ ಅಮಿತ್ ಶಾ ದೃಷ್ಟಿಯಲ್ಲಿ ಭ್ರಷ್ಟಾಚಾರದ ಅರ್ಥ ಏನು ? ಎಂದು ಪ್ರಶ್ನಿಸಿದರು.

ನಿಮ್ಮ ಆಟ ಗುಜರಾತ್, ಯುಪಿ ಸೇರಿ ಮತ್ತೇಲ್ಲೋ ನಡೆದಿರಬಹುದು.ಆದ್ರೆ ಕರ್ನಾಟಕದಲ್ಲಿ ನಿಮ್ಮ ಆಟ ನಡೆಯಲ್ಲ. ನೀವು ಕರ್ನಾಟಕದ ಪಾಲಿಗೆ ಚಾಣಕ್ಯ ಅಲ್ಲ. ಶಾ ಏನು ಅಂತಾ ಜನರಿಗೆ ಗೊತ್ತಿದೆ. ಸಿಬಿಐನಿಂದ ಹೇಗೆ ಹೊರ ಬಂದಿದ್ದೀರಿ ಅನ್ನೋದು ಗೊತ್ತಿದೆ. ಐಟಿ ದಾಳಿ ಬಗ್ಗೆ ನಾವು ಮಾತಾಡಲ್ಲ. ಐಟಿ ಚೌಕಟ್ಟಿನೊಳಗೆ ಅವರು ಕೆಲಸ ಮಾಡ್ತಾರೆ. ತಪ್ಪಿದ್ದರೆ ಶಿಕ್ಷೆ ಆಗಲಿ. ಆದ್ರೆ ಐಟಿ ಬಳಸಿಕೊಂಡು ರಾಜಕೀಯ ಮಾಡ್ತಿದ್ದಾರೆ. ಆ ಮೂಲಕ ನಮ್ಮ ನಾಯಕರನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಪರಮೇಶ್ವರ್ ಆರೋಪಿಸಿದರು.

ಅಮಿತ್ ಷಾ ಮತ್ತು ಬಿಜೆಪಿಯವರು ಹಿಂದೆ ಕೆಲ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮತಯಂತ್ರಗಳನ್ನ ದುರುಪಯೋಗ ಪಡಿಸಿಕೊಂಡಿದ್ದು ಸಾಬೀತಾಗಿದೆ.ಆದ್ರೆ ಇಂತಹ ತಂತ್ರಗಳು ಕರ್ನಾಟಕದಲ್ಲಿ ನಡೆಯಲ್ಲ. ಅಮಿತ್ ಶಾ ಬಂದಿದ್ದರಿಂದ ಕಾಂಗ್ರೆಸ್ ನಲ್ಲಿ ಯಾವ ನಡುಕ, ಭಯಾ‌ನೂ ಇಲ್ಲ. ಅವರಿಗೆ ಭಯವಾಗಿದ್ದರಿಂದಲೇ ಅಮಿತ್ ಶಾ ರಾಜ್ಯ ಬಿಜೆಪಿ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾಗಿದೆ ಎಂದು ಪರಂ ಶಾಗೆ ಚಾಟಿ ಬೀಸಿದರು.

ಬಡವರ ಹಸಿವು ನೀಗಿಸಲು ತೆರೆಯುತ್ತಿರುವ ಇಂದಿರಾ ಕ್ಯಾಂಟೀನ್ ನಾಳೆ ಕಾರ್ಯಾರಂಭಗೊಳ್ಳಲಿವೆ. ಇಂದಿರಾ ಕ್ಯಾಂಟಿನ್ ಕಡಿಮೆ ದರದಲ್ಲಿ ತಿಂಡಿ, ಊಟ ನೀಡಲಾಗುವುದು. 198 ವಾರ್ಡ್ ಗಳಲ್ಲಿ ಕ್ಯಾಂಟೀನ್ ತೆರೆಯಲಾಗುವುದು. ನಾಳೆ ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

 

5 thoughts on “ನಿಮ್ಮ ಆಟ ಕರ್ನಾಟಕದಲ್ಲಿ ನಡೆಯಲ್ಲ, ತಂತ್ರಗಾರಿಕೆಗೆ ರಾಜ್ಯದ ಜನತೆ ಮರಳಾಗಲ್ಲ : ಪರಮೇಶ್ವರ್

 • October 18, 2017 at 12:10 PM
  Permalink

  At this time it looks like WordPress is the top blogging platform out there right now. (from what I’ve read) Is that what you’re using on your blog?|

 • October 18, 2017 at 1:56 PM
  Permalink

  It’s remarkable designed for me to have a site, which is beneficial in favor of my experience. thanks admin|

 • October 18, 2017 at 3:40 PM
  Permalink

  I really like your blog.. very nice colors & theme. Did you create this website yourself or did you hire someone to do it for you? Plz answer back as I’m looking to construct my own blog and would like to know where u got this from. appreciate it|

 • October 20, 2017 at 7:13 PM
  Permalink

  Hello there! Would you mind if I share your blog with my twitter group? There’s a lot of folks that I think would really enjoy your content. Please let me know. Cheers|

 • October 21, 2017 at 3:58 AM
  Permalink

  Hi, its fastidious post on the topic of media print, we all understand media is a great source of information.|

Comments are closed.

Social Media Auto Publish Powered By : XYZScripts.com