ಪವನ್ ಒನ್ ಲೈನ್ ಸ್ಟೋರಿ ಕೇಳಿದ್ಮೇಲೆ ದರ್ಶನ್ ಕೊಟ್ಟ ಸಲಹೆ ಏನು ?

ದರ್ಶನ್ ಸಿನಿಮಾಗಳ ಫಸ್ಟ್ ಡೇ ಫಸ್ಟ್ ಶೋ ಕಲೆಕ್ಷನ್ ಹೇಗಿರುತ್ತೆ ಅನ್ನೋದನ್ನ ವಿವರಿಸಿ ಹೇಳ್ಬೇಕಿಲ್ಲ. ಯಾರು ಏನೇ ಅಂದ್ರೂ, ಅದೆಷ್ಟೇ ನೆಗೆಟಿವ್ ರಿವ್ಯೂ ಬಂದ್ರೂ, ರಿಲೀಸ್ ಆದ ಮೊದಲ ವಾರ ಗಳಿಕೆ ಭರ್ಜರಿಯಾಗಿರುತ್ತೆ. ಹೀಗಾಗಿ ಇವರ 50ನೇ ಚಿತ್ರಕ್ಕೆ ನಿರ್ಮಾಪಕರು ಕ್ಯೂ ನಿಂತಿದ್ರು. ಇರಲಿ ವಿಷ್ಯ 50ನೇ ಚಿತ್ರದ್ದಲ್ಲ.. 51ನೇ ಚಿತ್ರದ್ದು.

 

 

ದರ್ಶನ್ 51 ನೇ ಚಿತ್ರ ಯಾವುದು..? ಅದನ್ನ ಯಾರು ನಿರ್ದೇಶನ ಮಾಡ್ತಾರೆ ಅನ್ನೋ ಸುದ್ದಿ ಈಗ ಸದ್ದು ಮಾಡೋಕೆ ಶುರುಮಾಡಿದೆ. ಅಂದ್ಹಾಗೆ ಈ ಅವಕಾಶ  ಕನ್ನಡದ ಯುವ ನಿರ್ದೇಶಕನಿಗೆ ಒದಗಿದೆ. ಆ ಯುವ ನಿರ್ದೇಶಕ ಈಗಾಗಲೇ ಇಬ್ಬರು ಸೂಪರ್ ಸ್ಟಾರ್ ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಜತೆಗೆ ಗೂಗ್ಲಿ, ಪವರ್ ಸ್ಟಾರ್ ಪುನೀತ್ ಜೊತೆಗೆ ರಣವಿಕ್ರಮ ಚಿತ್ರ ಮಾಡಿದ್ದಾರೆ. ಇಷ್ಟು ಹೇಳಿದ್ಮೇಲೆ ಅವರು ಯಾರು ಅಂತ ನಿಮ್ಗೆ ಗೊತ್ತಾಗಿರಬೇಕು.

ಹೌದು ಅದೇ ಆಗಾಗ ಗೂಗ್ಲಿ ಹಾಕೋ ನಿರ್ದೇಶಕ ಪವನ್ ಒಡೆಯರ್. ಈಗಾಗ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಒನ್ ಲೈನ್ ಕಥೆ ಹೇಳಿ ಮುಗಿಸಿದ್ದಾರೆ. ಆದ್ರೆ  ದರ್ಶನ್ ಒಂದಷ್ಟು ಬದಲಾವಣೆಯನ್ನೂ ಹೇಳಿದ್ದಾರೆ. ದಾಸ ಹೇಳಿರೋ ಪ್ರಕಾರವೇ ಪವನ್ ಒಡೆಯರ್ ಕಥೆ ಬರೆಯೋಕೆ ಕುಳಿತಿದ್ದಾರೆ. ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಎಲ್ಲವನ್ನೂ ತಾವೇ ಮಾಡ್ತಿದ್ದಾರೆ. ಆದರೆ, ಯಾವುದು ಇನ್ನೂ ಫೈನಲ್ ಆಗಿಲ್ಲ.

ಪವನ್ ಒಡೆಯರ್ ಚಿತ್ರದ ಆ ಒನ್ ಲೈನ್ ನಲ್ಲಿ ಒಂದು ಸುಂದರ್ ಲವ್ ಸ್ಟೋರಿ ಇದೆ. ಆದರೆ ಅಲ್ಲಿ ಮನರಂಜನೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರಂತೆ. ಅದಕ್ಕೇನೆ ಪವನ್ ಒಡೆಯರ್ ಆ ಚಿತ್ರದ ಜಾನರ್ ಅನ್ನ ಲವ್ ಕಮ್ ಎಂಟರ್ಟೈನ್ಮೆಂಟ್ ಅಂತಲೇ ಹೇಳ್ತಿದ್ದಾರೆ. ಆದರೆ, ಚಿತ್ರ ಈಗಲೇ ಶುರು ಆಗೋದಿಲ್ಲ ಬಿಡಿ. ಮೊದಲು ಕುರುಕ್ಷೇತ್ರ ಚಿತ್ರ ಮುಗಿಯ ಬೇಕು. ಆ ಬಳಿಕವಷ್ಟೇ ಪವನ್ ಚಿತ್ರ ಶುರು. ದರ್ಶನ್ ಅವರ ಈ ಚಿತ್ರಕ್ಕೆ ಸಂದೇಶ್ ನಾಗರಾಜ್ ದುಡ್ಡು ಹಾಕ್ತಿದ್ದಾರೆ.

Comments are closed.