‘ ಒಂದಲ್ಲ ಹತ್ತು‌ ಅಮಿತ್ ಶಾ ಬಂದ್ರೂ ಏನೂ ಪ್ರಯೋಜನವಿಲ್ಲ ‘ : ಯು ಟಿ ಖಾದರ್

ಮಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಭೇಟಿ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಯು ಟಿ ಖಾದರ್  ‘ ಒಂದಲ್ಲ ಹತ್ತು‌ ಅಮಿತ್ ಶಾ  ಬಂದ್ರೂ ಏನೂ ಪ್ರಯೋಜನವಿಲ್ಲ. ರಾಜ್ಯ ಸರಕಾರದ, ಮುಖ್ಯಮಂತ್ರಿಗಳ ಜನಪರ ಕಾರ್ಯದಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುತ್ತೆ. ಕಾಂಗ್ರೆಸ್ ಮತ್ತೆ ಆಡಳಿತಕ್ಕೆ ಬರುವುದರಲ್ಲಿ ಸಂಶಯವಿಲ್ಲ ‘ ಎಂದು ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ಧಾರೆ.

ಉತ್ತರಪ್ರದೇಶದಲ್ಲಿ ಆಮ್ಲಜನಕ ಕೊರತೆಯಿಂದ ಮಕ್ಕಳ ಸಾವು ಪ್ರಕರಣದ ಕುರಿತಾಗಿ ಮಾತನಾಡಿದ ‘ ಕೇಂದ್ರದ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೂ ಕಾರಣ. ಯುಪಿ ಸಿಎಂ ಹಾಗೂ ಕೇಂದ್ರ ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ಈ ಬಗ್ಗೆ ಕೇಂದ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ‘ ಎಂದು ಮಂಗಳೂರಿನಲ್ಲಿ  ಸಚಿವ ಯು.ಟಿ .ಖಾದರ್ ಹೇಳಿಕೆ ನೀಡಿದ್ದಾರೆ.

ನೇತ್ರಾವತಿ ನದಿ ನೀರು ಬೆಂಗಳೂರಿಗೆ ಪೂರೈಕೆ ಮಾಡುವ ಬಗ್ಗೆ ಮಾತನಾಡಿ ‘ ಮಳೆ ನೀರನ್ನು ಶೇಖರಿಸಿ ಬೆಂಗಳೂರಿಗೆ ಪೂರೈಕೆ ಮಾಡುವ ಯೋಜನೆ ಪ್ರಾಥಮಿಕ ಹಂತದಲ್ಲಿದೆ. ಜನರ ಸಹಕಾರ, ಅನುಮೋದನೆ ಪಡೆದು ಯೋಜನೆ ಜಾರಿ ಮಾಡಲಾಗುವುದು ‘ ಎಂದರು.

ಕಲ್ಲಡ್ಕ ಶಾಲೆಗಳಿಗೆ ಅನ್ನದಾನದ ಅನುದಾನ  ಕಡಿತ ಹಿನ್ನೆಲೆಯಲ್ಲಿ ಮಾತನಾಡಿದ ಖಾದರ್ ‘ ಧಾರ್ಮಿಕ ದತ್ತಿ ಪರಿಷತ್ ಕೈಗೊಂಡಿರುವ ನಿರ್ಧಾರವಿದು, ಈಗಾಗಲೇ ಸಮಿತಿ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ವಿನಾ ಕಾರಣ ಸಿಎಂ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ರಾಜಕೀಯಗೋಸ್ಕರ ಆರೋಪ ಮಾಡುವುದು ತರವಲ್ಲ. ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದ್ದಾರೆ ‘ ಎಂದು ಸಚಿವ ಖಾದರ್ ಹೇಳಿದ್ಧಾರೆ.

Comments are closed.