‘ ಅಮ್ಮ ದಯವಿಟ್ಟು ನನಗೆ ಸಹಾಯ ಮಾಡಿ ‘ : ಸುಷ್ಮಾಗೆ ಪಾಕ್ ಮಹಿಳೆಯ ವಿನಂತಿ

ನವದೆಹಲಿ : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಚಿಕಿತ್ಸೆಗೆಂದು ಭಾರತಕ್ಕೆ ಬರಲು ಇಚ್ಛಿಸಿರುವ ಪಾಕಿಸ್ತಾನಿ ಮಹಿಳೆಯೊಬ್ಬರಿಗೆ ವೀಸಾ ನೀಡುವುದಾಗಿ ಭರವಸೆ ನೀಡಿದ್ದಾರೆ. ಪಾಕಿಸ್ತಾನಿ ಮಹಿಳೆ ಫೈಜಾ ತನ್ವೀರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ವೈದ್ಯಕೀಯ ವೀಸಾ ಕೋರಿ ಸುಷ್ಮಾ ಸ್ವರಾಜ್ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.

‘ ಮೇಡಮ್, ನೀವು ನನಗೆ ತಾಯಿ ಇದ್ದಂತೆ, 70 ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಭಾರತ ನನಗೆ ಸಹಾಯ ಮಾಡಬೇಕು. ದಯವಿಟ್ಟು ನನಗೆ ವೀಸಾ ಕೊಡಿಸಿ, ದಯವಿಟ್ಟು ನನಗೆ ಸಹಾಯ ಮಾಡಿ, ಥ್ಯಾಂಕ್ ಯು ‘ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್ ‘ ಸ್ವಾತಂತ್ರೋತ್ಸವದ ಶುಭಾಶಯ ಕೋರಿರುವ ನಿಮಗೆ ದನ್ಯವಾದಗಳು, ಭಾರತದಲ್ಲಿ ಚಿಕಿತ್ಸೆ ಪಡೆಯಲು ನಾವು ನಿಮಗೆ ವೀಸಾ ನೀಡುತ್ತಿದ್ದೇವೆ ‘ ಎಂದು ಟ್ವೀಟ್ ಮಾಡಿದ್ದಾರೆ.

ಫೈಜಾ ಅಮೆಲೊ ಬ್ಲಾಸ್ಟೊಮಾ ಎಂಬ ಟ್ಯುಮರ್ ಗೆ ತುತ್ತಾಗಿದ್ದು, ಭಾರತದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಲು ಬಯಸಿದ್ದಾರೆ.

Comments are closed.

Social Media Auto Publish Powered By : XYZScripts.com