ಪಾರ್ಕ್‌ನಲ್ಲಿ ಬಾಲಕಿ ಸಾವು ಪ್ರಕರಣ : ಐದು ಲಕ್ಷ ಪರಿಹಾರ ಘೋಷಿಸಿದ ಮೇಯರ್‌

ಬೆಂಗಳೂರು : ಮಹದೇವಪುರ ಎಂಇಜಿ ಲೇಔಟ್ ಪಾರ್ಕ್ ನಲ್ಲಿ ಬಾಲಕಿ ಸಾವು ಪ್ರಕರಣ ಹಿನ್ನೆಲೆಯಲ್ಲಿ ಘಟನೆ ನಡೆದ ಪಾರ್ಕ್‌ಗೆ ಮೇಯರ್‌ ಪದ್ಮಾವತಿ ಭೇಟಿ ನೀಡಿದ್ದಾರೆ. ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಪೊರೇಟರ್‌ರಿಂದ ಮಾಹಿತಿ ಪಡೆದಿದ್ದಾರೆ.

ಬಾಲಕಿ ಪ್ರಾಜೆಕ್ಟ್‌ ವರ್ಕ್‌ ಮಾಡಲು ಸ್ನೇಹಿತೆಯ ಮನೆಗೆ ಹೋಗಿದ್ದಳು. ನಂತರ ಸ್ನೇಹಿತರ ಜೊತೆ ಪಾರ್ಕಿನಲ್ಲಿ ಆಟವಾಡಲು ಬಂದಿದ್ದಳು. ಜಾರು ಬಂಡಿ ಹಿಡಿದು ಸುತ್ತುತ್ತಿದ್ದಾಗ, ನಿಲ್ಲಿಸಿದ್ದ ಆಟಿಕೆ ವಸ್ತು ಬಾಲಕಿಯ ಮೇಲೆ ಬಿದ್ದಿದೆ. ಇದು ಬಿಬಿಎಂಪಿ ನಿರ್ಲಕ್ಷ್ಯವಲ್ಲ. ಯಾಕೆಂದರೆ ಅದನ್ನು ನಾವು ಅಳವಡಿಸಿರಲಿಲ್ಲ. ವಸ್ತುಗಳನ್ನು ಅಳವಡಿಸಲು ತಂದು ನಿಲ್ಲಿಸಲಾಗಿತ್ತು ಅಷ್ಟೇ ಎಂದಿದ್ದಾರೆ. ಇದೇ ವೇಳೆ ಮೇಯರ್‌ ಹಾಗೂ ಬಾಲಕಿ ಪೋಷಕರ ನಡುವೆ ಮಾತಿನ ಚಕಮಕಿ ಸಹ ನಡೆದಿದ್ದು, ಕೊನೆಗೆ ಬಾಲಕಿ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಿದ್ದಾರೆ.

 

 

Comments are closed.

Social Media Auto Publish Powered By : XYZScripts.com