IND vs SL 3rd Test : ಭಾರತಕ್ಕೆ 171 ರನ್ ಗೆಲುವು, 3-0 ರಿಂದ ಸರಣಿ ವೈಟ್ ವಾಷ್

ಕ್ಯಾಂಡಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 171 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಭಾರತ ಸರಣಿಯನ್ನು 3-0 ಯಿಂದ ವೈಟ್ ವಾಷ್ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿಚ 487 ರನ್ ಸೇರಿಸಿ ಆಲೌಟ್ ಆಗಿತ್ತು. ಭಾರತದ ಪರ ಶಿಖರ್ ಧವನ್ 119, ಹಾರ್ದಿಕ್ ಪಾಂಡ್ಯ 108, ಕೆ ಎಲ್ ರಾಹುಲ್ 85 ರನ್ ಗಳಿಸಿದ್ದರು. ಲಂಕಾ ಪರವಾಗಿ ಲಕ್ಷನ್ ಸಂದಕನ್ 5 ವಿಕೆಟ್ ಪಡೆದಿದ್ದರು.

ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 135 ಮೊತ್ತಕ್ಕೆ ಆಲೌಟ್ ಆಗಿತ್ತು. ಭಾರತದ ಪರ ಚೈನಾಮನ್ ಬೌಲರ್ ಕುಲದೀಪ್ ಯಾದವ್ 4 ವಿಕೆಟ್ ಪಡೆದಿದ್ದರು. ಇನ್ನೂ 352 ರನ್ ಹಿಂದಿದ್ದ ಲಂಕಾ ಮೇಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಾಲೋ ಆನ್ ಹೇರಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 181 ಗಳಿಸಲಷ್ಟೇ ಶಕ್ತವಾಗಿ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಆರ್ ಅಶ್ವಿನ್ 4 ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು.

Comments are closed.

Social Media Auto Publish Powered By : XYZScripts.com