WATCH : ಈ ಕ್ಯಾಚ್ ನೋಡಿದ್ರೆ, ಮೈ ಜುಮ್ಮೆನ್ನುವುದು ಗ್ಯಾರಂಟಿ..!!

ಕ್ರಿಕೆಟ್ ನಲ್ಲಿ ಬೆಸ್ಟ್ ಫೀಲ್ಡರ್ಸ್ ಯಾರು ಅಂದ ತಕ್ಷಣ ಯಾರ ಹೆಸರು ನೆನಪಾಗುತ್ತೆ..? ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್, ಫಾಫ್ ಡು ಪ್ಲೆಸಿಸ್, ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಸೈಮಂಡ್ಸ್, ರಿಕಿ ಪಾಂಟಿಂಗ್,  ಭಾರತದ ಮಹಮ್ಮದ್ ಕೈಫ್, ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ನ ಕೀರನ್ ಪೊಲ್ಲಾರ್ಡ್, ಬ್ರಾವೋ ಹೀಗೆ ಲಿಸ್ಟ್ ದೊಡ್ಡದಾಗುತ್ತಲೇ ಹೋಗುತ್ತದೆ.. ಇವರೆಲ್ಲ ತಮ್ಮ ಅದ್ಭುತ ಫೀಲ್ಡಿಂಗ್ ಗೆ, ಕ್ಯಾಚಿಂಗ್ ಗೆ ಹೆಸರಾದವರು.. ಇಂತಹ ಗ್ರೇಟ್ ಫೀಲ್ಡರ್ ಗಳು ಹಿಡಿಯುವ ಕ್ಯಾಚ್ ಗಳು ಒಮ್ಮೊಮ್ಮೆ ಪಂದ್ಯದ ಗತಿಯನ್ನೇ ಬದಲಾಯಿಸಿಬಿಡುತ್ತವೆ.. ‘ಕ್ಯಾಚಸ್ ವಿನ್ ಮ್ಯಾಚಸ್’ ಅನ್ನೋ ಮಾತು ಕ್ರಿಕೆಟ್ ನಲ್ಲಿ ಆಗಾಗ ಪ್ರೂವ್ ಆಗುತ್ತಲೇ ಇರುತ್ತೆ..

ಇಂಗ್ಲೆಂಡಿನ ನ್ಯಾಟ್ ವೆಸ್ಟ್ ಟಿ-20 ಚಾಂಪಿಯನ್ ಷಿಪ್ ನ ಪಂದ್ಯವೊಂದರಲ್ಲಿ, ಯಾರ್ಕ್ ಶೈರ್ ತಂಡದ ಜಾಕ್ ಲೀನಿಂಗ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.. ಲಿಯಮ್ ಪ್ಲಂಕೆಟ್ ಎಸೆದ, ಫುಲ್ ಟಾಸ್ ಎಸೆತವನ್ನು ಲಂಕಾಶೈರ್ ಬ್ಯಾಟ್ಸ್ಮನ್ ಆ್ಯರನ್ ಲಿಲ್ಲಿ, ಡೀಪ್ ಕವರ್ ಕ್ಷೇತ್ರದತ್ತ ಬಾರಿಸಿದ್ದಾರೆ..

Image result for jack leaning catch  Image result for jack leaning catch

ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜ್ಯಾಕ್ ಲೀನಿಂಗ್ ಗಾಳಿಯಲ್ಲಿ ಜಿಗಿದು, ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುವಲ್ಲಿ ಸಫಲರಾಗಿದ್ದಾರೆ.. ಜ್ಯಾಕ್ ಲೀನಿಂಗ್ ಅವರ ಅದ್ಭುತ ಜಡ್ಜ್ ಮೆಂಟ್, ಜಿಗಿತದ ಟೈಮಿಂಗ್, ದೇಹವನ್ನು ಬ್ಯಾಲನ್ಸ್ ಮಾಡಿದ ರೀತಿ ಎಲ್ಲವೂ ಸೂಪರ್ಬ್.. ಜಾಕ್ ಕ್ಯಾಚ್ ಮಿಸ್ ಮಾಡಿಲ್ಲ.. ನೀವು ವಿಡಿಯೋ ನೋಡೋದನ್ನ ಮಿಸ್ ಮಾಡ್ಕೋಬೇಡಿ.. ಆ ಸೂಪರ್ ಕ್ಯಾಚ್ ನ ವಿಡಿಯೋ ಇಲ್ಲಿದೆ..

Comments are closed.

Social Media Auto Publish Powered By : XYZScripts.com