‘ ಸುಳ್ಳುಗಳ ಸರದಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾಹ್ ‘ : ದಿನೇಶ್ ಗುಂಡೂರಾವ್

ಬಿಜೆಪಿ ನಾಯಕ ಅಮಿತ್ ಶಾಹ್ ಬೆಂಗಳೂರು ಭೇಟಿ ಬಗ್ಗೆ ಪ್ರತಿಕ್ರಿಯಿಸಿ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.  ‘ ವಿಸ್ತಾರಕರು ಹಂಚಿರುವ ಭಿತ್ತಿ ಪತ್ರದಲ್ಲಿರು ಸುಳ್ಳಿನ ಬಗ್ಗೆ ಅಮಿತ್ ಶಾ ಉತ್ತರ ನೀಡುತ್ತಾರಾ? ರಾಜ್ಯದಲ್ಲಿ ಕೋಮುಗಲಭೆ ಮಾಡಿಸಲು ಹೊರಟಿದ್ದೀರಿ. ಗಣೇಶ ಹಬ್ಬಕ್ಕೆ ಹತ್ತು ಲಕ್ಷ ರೂಪಾಯಿ ಕಟ್ಟ ಬೇಕಂತೆ ಎಂದು ಜನರಲ್ಲಿ ಸುಳ್ಳು ಸುದ್ಧಿ ಹಬ್ಬಿಸಿದ್ದೀರಿ. ಈ ಮೂಲಕ ಜನರಲ್ಲಿ ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸುತ್ತೀದ್ದೀರಿ. ಬೆಂಗಳೂರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದೀರಿ. ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು. ಮಹದಾಯಿ ವಿಚಾರದಲ್ಲಿ ನ್ಯಾಯ ಕೊಡಿಸುವ ಪ್ರಯತ್ನವಾದರೂ ಮಾಡಿದ್ದೀರಾ? ಗುಜರಾತ್ ಗೆ 3800 ಕೋಟಿ, ರಾಜ್ಯಕ್ಕೆ 1500 ಕೋಟಿ, ಮಹಾರಾಷ್ಟ್ರಕ್ಕೆ 8 ಸಾವಿರ ಕೋಟಿ ಬರಪರಿಹಾರ ನೀಡಿದ್ದೀರಿ. ನಮ್ಮ ರಾಜ್ಯಕ್ಕೆ ಏಕೆ ಈ ತಾರತಮ್ಯ? ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿದ್ದೀರಿ ‘ ಎಂದು ಆರೋಪಿಸಿದರು.

ಉಪೇಂದ್ರ ರಾಜಕೀಯ ಪ್ರವೇಶ  ಕುರಿತು ದಿನೇಶ್ ಗುಂಡೂರಾವ್ ಹೇಳಿಕೆ ನೀಡಿ ‘ ನಮ್ಮದು ಪ್ರಜಾಪ್ರಭುತ್ವ, ಯಾರು ಬೇಕಾದರೂ ಪಕ್ಷ ರಚನೆ ಮಾಡಬಹುದು, ಹಲವು ರಾಜಕೀಯ ಪಕ್ಷಗಳು ಈಗಾಗಲೇ ರಾಜ್ಯದಲ್ಲಿ ರಚನೆ ಆಗಿವೆ. ಉಪೇಂದ್ರ ಅವರು ಪಕ್ಷ ರಚನೆ ಮಾಡಲು ಹೊರಟಿದ್ದಾರೆ ಅವರಿಗೆ ಒಳ್ಳೆಯದಾಗಲೀ ಅಂತ ಶುಭ ಹಾರೈಸುತ್ತೇನೆ. ಆದರೆ ಪಕ್ಷ ನಡೆಸೊದು ಸುಲಭವಲ್ಲ, ಉಪೇಂದ್ರ ಜನಪರ ಹೋರಾಟ ಮಾಡೋದು ಇಲ್ಲಿವರೆಗೆ ನಾನು ನೋಡಿಲ್ಲ, ಇನ್ನು ಮುಂದೆಯಾದರೂ ಹೋರಾಟ ಮಾಡಲಿ’ ಎಂದರು.

4 thoughts on “‘ ಸುಳ್ಳುಗಳ ಸರದಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾಹ್ ‘ : ದಿನೇಶ್ ಗುಂಡೂರಾವ್

 • October 18, 2017 at 12:48 PM
  Permalink

  I every time spent my half an hour to read this web site’s articles or reviews all the time along with a cup of coffee.|

 • October 18, 2017 at 2:34 PM
  Permalink

  Excellent web site you’ve got here.. It’s difficult to find excellent writing like yours nowadays. I truly appreciate individuals like you! Take care!!|

 • October 21, 2017 at 2:47 AM
  Permalink

  I am not sure where you are getting your info, but great topic. I needs to spend some time learning more or understanding more. Thanks for magnificent information I was looking for this info for my mission.|

Comments are closed.

Social Media Auto Publish Powered By : XYZScripts.com