ಡೋಕ್ಲಾಮ್‌ ಬಿಕ್ಕಟ್ಟು : ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜಿಸಿದ ಭಾರತ

ದೆಹಲಿ : ಭಾರತ -ಚೀನಾ ಮಧ್ಯೆ ಗಡಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚೀನಾ ಪದೇ ಪದೇ ಭಾರತಕ್ಕೆ ಎಚ್ಚರಿಕೆ ಕೊಡುತ್ತಿರುವ ಹಿನ್ನೆಲೆಯಲ್ಲಿ, ಚೀನಾಗೆ ಸೆಡ್ಡು ಹೊಡೆದಿರುವ ಭಾರತ ಗಡಿಯಲ್ಲಿ ಯೋಧರ ಜಮಾವಣೆಯನ್ನು ಹೆಚ್ಚಿಸಿದೆ. ಸಿಕ್ಕಿನಿಂದ ಅರುಣಾಚಲ ಪ್ರದೇಶದದ 1400 ಕಿ.ಮೀ ವರೆಗೂ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿದ್ದು, ಚೀನಾಗೆ ತನ್ನ ಕಾರ್ಯದ ಮೂಲಕ ಉತ್ತರ ನೀಡಿದೆ.

ಡೋಕ್ಲಾಮ್‌ ಪ್ರದೇಶದಿಂದ ಭಾರತ ತನ್ನ ಸೇನೆಯನ್ನು ಹಿಂಪಡೆಯದಿದ್ದರೆ, ಭಾರತದ ಮೇಲೆ ಸಣ್ಣ ಪ್ರಮಾಣದ ದಾಳಿ ನಡೆಸಬೇಕಾಗುತ್ತದೆ ಎಂದು ಚೀನಾ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ತನ್ನ ಸೇನೆಯನ್ನು ಸಿದ್ಧ ಮಾಡಿದೆ. ಈ ಕುರಿತು ಮಾಹಿತಿ ನೀಡಲು ಸೇನಾ ಮೂಲಗಳು ನಿರಾಕರಿಸಿದ್ದು, ಕಾರ್ಯಾಚರಣೆಯ ಮಾಹಿತಿಯನ್ನು ಬಹಿರಂಗ ಪಡೆಸಲು ಸಾಧ್ಯವಿಲ್ಲ ಎಂದಿದೆ.

ಕಳೆದ ಎರಡು ತಿಂಗಳಿನಿಂದ ಡೋಕ್ಲಾಮ್‌ ಗಡಿಯಲ್ಲಿ ಭಾರತ -ಚೀನಾ ಮಧ್ಯೆ ಬಿಕ್ಕಟ್ಟು ಉಲ್ಬಣವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚೀನಾ ಭಾರತಕ್ಕೆ ಎಚ್ಚರಿಕೆ ನೀಡುತ್ತಲೇ ಬರುತ್ತಿದೆ. ಈ ಎಲ್ಲಾ ಎಚ್ಚರಿಕೆಗಳಿಗೂ ಭಾರತ ಹೆಚ್ಚಿನ ಸೇನೆ ಜಮಾವಣೆ ಮಾಡುವುದರ ಮೂಲಕ ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂಬ ಉತ್ತರ ನೀಡಿದೆ.

ಎರಡು ದಿನಗಳ ಹಿಂದಷ್ಟೇ ಭಾರತ ಸೇನೆ ಡೋಕ್ಲಾಮ್‌ನ ನಾಂಥಂಗ್‌ ಗ್ರಾಮದ ಜನರನ್ನು ಸ್ಥಳಾಂತರಿಸಿದ್ದಾಗಿ ವರದಿಯಾಗಿತ್ತು. ಆದರೆ ನಿನ್ನೆ ಆ ವರದಿಯನ್ನು ಸೇನೆ ತಳ್ಳಿ ಹಾಕಿತ್ತು. ಈಗ ಹೆಚ್ಚಿನ ಸೇನೆ ಜಮಾವಣೆ ಮಾಡಿರುವುದು ಆತಂಕಕ್ಕೀಡು ಮಾಡಿದೆ.

 

Comments are closed.

Social Media Auto Publish Powered By : XYZScripts.com