ಚುನಾವಣೆ ಬಂದಾಗ ಉಪೇಂದ್ರರಂತ ಹಾವುಗಳು ಹುತ್ತದಿಂದ ಹೊರಗೆ ಬರ್ತಾವೆ : ವಿನಯ್‌ ಕುಲಕರ್ಣಿ

ಧಾರವಾಡ : ನಟ ಉಪೇಂದ್ರ ರಾಜಕೀಯ ಪ್ರವೇಶ ವಿಚಾರ ಸಂಬಂಧ ವಿನಯ್‌ ಕುಲಕರ್ಣಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಮೀಪಕ್ಕೆ ಬಂದಾಗ ಇಂಥವರು ಬಹಳ ಜನ ಹೊರಗೆ ಬರ್ತಾರೆ, ಈಗ ಉಪೇಂದ್ರ ಬಂದಿದ್ದಾರೆ.

ಮುಂದೆ ಇಂತಹ ಹಾವುಗಳು ಇನ್ನೂ ಹುತ್ತದಿಂದ ಹೊರಗೆ ಬರ್ತಾನೆ ಇರ್ತಾವೆ. ಚಿರಂಜೀವಿಯಂತಹ ದೊಡ್ಡ ನಟರೇ ರಾಜಕಾರದಲ್ಲಿ ಸಕ್ಸಸ್ ಆಗಿಲ್ಲ. ಇನ್ನು ಉಪೇಂದ್ರ ಯಶಸ್ಸು ಸಾಧಿಸಲು ಸಾಧ್ಯಾನಾ ಎಂದು ಪ್ರಶ್ನಿಸಿದ್ದಾರೆ. ಉಪೇಂದ್ರ ಅವರು ಇಲ್ಲಿಯವರೆಗೂ ರೈತಪರ, ಬಡವರ ಪರ ಏನೂ ಮಾಡಿಲ್ಲ. ನೇರವಾಗಿ ಈಗ ರಾಜಕೀಯಕ್ಕೆ ಬರ್ತಿದ್ದಾರೆ. ಆದ್ದರಿಂದ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುವುದಾಗಿ ಹೇಳಿದ್ದಾರೆ.

 

Comments are closed.