ಸಿಬಿಎಫ್‌ಸಿ ಅಧ್ಯಕ್ಷ ಸ್ಥಾನದಿಂದ ನಿಹ್ಲಾನಿಗೆ ಕೊಕ್‌ : ಸಾಹಿತಿ ಪ್ರಸೂನ್‌ ಜೋಷಿಗೆ ಒಲಿದ ಪಟ್ಟ

ದೆಹಲಿ : ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಪಹ್ಲಾಜ್‌ ನಿಹ್ಲಾನಿ ಅವರನ್ನು ವಜಾಗೊಳಿಸಲಾಗಿದೆ. ಅವರ ಸ್ಥಾನಕ್ಕೆ ಸಾಹಿತಿ ಪ್ರಸೂನ್‌ ಜೋಷಿ ಅವರನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ನೇಮಿಸಿ ಆದೇಶ ಹೊರಡಿಸಿದೆ.

ಇತ್ತೀಚೆಗಷ್ಟೇ ಐಬಿ ನಿಹ್ಲಾನಿ ಅವರನ್ನು ಬದಲಿಸುವ ಕುರಿತು ಮಾತುಕತೆ ನಡೆಸಿತ್ತು. ಜೊತೆಗೆ ಆ ಸ್ಥಾನಕ್ಕೆ ನಿರ್ದೇಶಕ ಪ್ರಕಾಶ್‌ ಜಾ ಅಥವಾ ಟಿವಿ ನಿರ್ಮಾಪಕ, ನಟ ಚಂದ್ರಪ್ರಕಾಶ್‌ ದ್ವಿವೇದಿ ಅವರನ್ನು ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಚರ್ಚೆ ನಡೆಸಿತ್ತು. ಕೊನೆಗೆ ಆ ಸ್ಥಾನಕ್ಕೆ ಜೋಷಿ ಅವರನ್ನು ನೇಮಿಸಿದೆ.

ನಿಹ್ಲಾನಿ 2015ರ ಜನವರಿ 19ರಂದು ಸಿಬಿಎಫ್‌ಸಿ ನಿರ್ದೇಶಕರಾಗಿ ನೇಮಕಗೊಂಡಿದ್ದು, ಸಾಕಷ್ಟು ಸಿನಿಮಾಗಳು ಇವರ ಅವಧಿಯಲ್ಲಿ ವಿವಾದಕ್ಕೀಡಾಗಿದ್ದವು.

 

One thought on “ಸಿಬಿಎಫ್‌ಸಿ ಅಧ್ಯಕ್ಷ ಸ್ಥಾನದಿಂದ ನಿಹ್ಲಾನಿಗೆ ಕೊಕ್‌ : ಸಾಹಿತಿ ಪ್ರಸೂನ್‌ ಜೋಷಿಗೆ ಒಲಿದ ಪಟ್ಟ

Comments are closed.