ಉತ್ತರ ಪ್ರದೇಶ : ಆಸ್ಪತ್ರೆಯೊಂದರಲ್ಲಿ 17 ನವಜಾತ ಶಿಶುಗಳೂ ಸೇರಿ 30 ಮಕ್ಕಳ ಸಾವು..

ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ದ್ರವ ಆಮ್ಲಜನಕದ ಕೊರತೆಯಿಂದಾಗಿ 30 ಜನ ಮಕ್ಕಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೇವಲ 48 ಗಂಟೆಗಳ ಅಂತರದ ಅವಧಿಯಲ್ಲಿ 30 ಮಕ್ಕಳ ಸಾವು ಸಂಭವಿಸಿದೆ. ‘ಇದು ಅತ್ಯಂತ ದುರದೃಷ್ಟಕರ ‘ ಎಂದು ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜಿನ ತಪಾಸಣೆಯನ್ನು ಕೈಗೊಂಡ ಬಿಜೆಪಿ ಲೋಕಸಭಾ ಸದಸ್ಯ ಕಮಲೇಶ ಪಾಸ್ವಾನ್ ಹೇಳಿದ್ಧಾರೆ. ಸತ್ತಿರುವ 30 ಮಕ್ಕಳಲ್ಲಿ 17 ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿವೆ. 8 ಮಕ್ಕಳ ವಿಭಾಗದಲ್ಲಿ, 5 ಮಕ್ಕಳು ಎನ್ಸೆಫಾಲಿಟಿಸ್ ಸಿಂಡ್ರೋಮ್ ವಿಭಾಗದಲ್ಲಿಯೂ ಮೃತಪಟ್ಟಿವೆ.

Image result for uttara pradesh hospital 30 death

ಪ್ರಾರಂಭದ ವರದಿಯ ಪ್ರಕಾರ ಆಮ್ಲಜನಕದ ಕೊರತೆಯಿಂದಾಗಿ ಈ ದುರಂತ ಸಂಭವಿಸಿದೆಯೆಂದು ಹೇಳಲಾಗಿತ್ತು, ಆದರೆ ಮಕ್ಕಳ ಸಾವಿಗೂ ಆಮ್ಲಜನಕದ ಕೊರತೆಯ ಸಮಸ್ಯೆಗೂ ಯಾವ ಸಂಬಂಧವೂ ಇಲ್ಲವೆಂದು ಸರ್ಕಾರ ಹೇಳಿದೆ. ಜಿಲ್ಲಾಡಳಿತವೂ ಇದೇ ಮಾತನ್ನು ಹೇಳಿದ್ದು, ದ್ರವ ಆಮ್ಲಜನಕದ ಪೊರೈಕೆಯಲ್ಲಿ ವಿಳಂಬವಾಗಿದೆಯೆಂದು ಒಪ್ಪಿಕೊಂಡಿದೆ.

Comments are closed.

Social Media Auto Publish Powered By : XYZScripts.com