ದಸರಾ ಆನೆ, ಮಾವುತರಿಗೆ ತಲಾ 1ಕೋಟಿ ವಿಮೆ ಮಾಡಿಸಿದ ಅರಣ್ಯ ಇಲಾಖೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಕಾರ್ಯಕ್ರಮಕ್ಕೆ ಆಗಮಿಸುವ ಆನೆಗಳಿಗೆ ಹಾಗೂ ಮಾವುತರಿಗೆ 1 ಕೋಟಿ ರೂ ವಿಮೆ ಮಾಡಿಸಲಾಗಿದೆ.

ಜಂಬೂ ಸವಾರಿಯಲ್ಲಿ ಭಾಗಿಯಾಗುವ 15 ಆನೆಗಳು ಹಾಗೂ ಮಾವುತರು, ಕಾವಾಡಿಗಳಿಗೆ ನಾಳೆಯಿಂದ ವಿಮಾ ಪಾಲಿಸಿ ಜಾರಿಗೆ ಬರಲಿದೆ. ಪ್ರಕೃತಿ ವಿಕೋಪ ಹಾಗೂ ಆಕಸ್ಮಿಕವಾಗಿ ಸಂಭವಿಸುವ ಅನಾಹುತಗಳಿಗೆ ಪರಿಹಾರವಾಗಿ ಈ ವಿಮೆ ಲಭ್ಯವಾಗಲಿದೆ. ಪ್ರತೀ ವರ್ಷವೂ ಆನೆಗಳಿಗೆ ಹಾಗೂ ಮಾವುತರಿಗೆ ಅರಣ್ಯ ಇಲಾಖೆ ವಿಮೆ ಮಾಡಿಸಿಕೊಂಡು ಬರುತ್ತಿದ್ದು, ಈ ಬಾರಿ ವಿಮೆಯ ಮೊತ್ತವನ್ನು 1ಕೋಟಿಗೆ ಹೆಚ್ಚಿಸಲಾಗಿದೆ.

Comments are closed.

Social Media Auto Publish Powered By : XYZScripts.com