ಜಾವೆಲಿನ್ ವಿಶ್ವಚಾಂಪಿಯನ್ ಷಿಪ್ : ಫೈನಲ್ ತಲುಪಿದ ಮೊದಲ ಭಾರತೀಯ ದಾವಿಂದರ್ ಸಿಂಗ್

ಪಂಜಾಬ್ ನ ದಾವಿಂದರ್ ಸಿಂಗ್ ಕಾಂಗ್ ಜಾವೆಲಿನ್ ಎಸೆತ ವಿಶ್ವಚಾಂಪಿಯನ್ ಷಿಪ್ ನ ಫೈನಲ್ ತಲುಪಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಆದರೆ ಭಾರತದ ಇನ್ನೊಬ್ಬ ಸ್ಪರ್ಧಿ ನೀರಜ್ ಚೋಪ್ರಾ ಅರ್ಹತಾ ಸುತ್ತಿನಲ್ಲಿಯೇ ಹೊರಬಿದ್ದಿದ್ದಾರೆ.

ಭುಜದ ಗಾಯದ ಹೊರತಾಗಿಯೂ ಕಣಕ್ಕಿಳಿದ 26 ವರ್ಷದ ದಾವಿಂದರ್ ಸಿಂಗ್ ,  ಗುರುವಾರ ನಡೆದ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿ ತಮ್ಮ ಮೂರನೆಯ ಹಾಗೂ ಅಂತಿಮ ಎಸೆತದಲ್ಲಿ 83 ಮೀಟರ್ ಗುರಿಯನ್ನು ಮೀರಿಸಿ 84.22 ಮೀಡರ್ ದೂರಕ್ಕೆ ಜಾವೆಲಿನ್ ಎಸೆದರು. ಮೊದಲ ಎಸೆತದಲ್ಲಿ 82.22 ಮೀಟರ್ ಹಾಗೂ ಎರಡನೆಯ ಪ್ರಯತ್ನದಲ್ಲಿ  82.14 ಮೀಟರ್ ದೂರ ಎಸೆದಿದ್ದರು.

‘ಎ’ ಗುಂಪಿನಿಂದ 5 ಜನ ಹಾಗೂ ‘ಬಿ’ ಗುಂಪಿನಿಂದ 7, ಒಟ್ಟು 12 ಜನ ಫೈನಲ್ ಸುತ್ತಿಗೆ ಆಯ್ಕೆಯಾಗಿದ್ದಾರೆ.

Comments are closed.