ಜಂಕ್ ರೋಗಕ್ಕೊಂದು ಮಾತ್ರಿಕ ಮದ್ದು, ಅಗ್ನಿ ಶ್ರೀಧರ್ ಹೊಸ ಯುಟ್ಯೂಬ್ ಚಾನೆಲ್

ಬರಹಗಾರ, ಸಂಪಾದಕ, ನಟ ಭೂಗತ ಲೋಕದ ಮಾಜಿ ಡಾನ್ ಅಗ್ನಿ ಶ್ರೀಧರ್ ಯಟ್ಯೂಬ್ ಚಾನೆಲ್ ಶುರುಮಾಡಲಿದ್ದಾರೆ. ಜಂಕ್ ಫುಡ್, ಜಂಕ್ ನ್ಯೂಸ್, ಜಂಕ್ ಮೆಡಿಸಿನ್, ಜಂಕ್ ರಿಲಿಜನ್, ಜಂಕ್ ಅಫೇರ್, ಜಂಕ್ ಮೆಡಿಸಿನ್ ಇವುಗಳೆಲ್ಲ ಜಂಕ್ ಸಮಾಜವನ್ನು ರೂಪಿಸುತ್ತವೆ, ಜಂಕ್ ವ್ಯಕ್ತಿತ್ವವನ್ನು ರೂಢಿಸುತ್ತವೆ, ಜಂಕ್ ಮನಸ್ಥಿತಿಯನ್ನು ಬಿತ್ತುತ್ತವೆ. ಈ ಜಂಕ್ ರೋಗಕ್ಕೆ ಮಾಂತ್ರಿಕ ಮದ್ದು ಕಂಡುಹಿಡಿಯುವ ಉದ್ದೇಶದೊಂದಿಗೆ ಯುಟ್ಯೂಬ್ ಚಾನೆಲ್ ಒಂದನ್ನು ಅಗ್ನಿ ಶ್ರೀಧರ್ ಆರಂಭಿಸುತ್ತಿದ್ದಾರೆ.

ಭೂಗತ ಲೋಕದಲ್ಲಿ ಸಕ್ರಿಯರಾಗಿದ್ದಾಗಿನ ತಮ್ಮ ಅನುಭವಗಳ ಕುರಿತಂತೆ ‘ದಾದಾಗಿರಿಯ ಆ ದಿನಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಶಿವರಾಜಕುಮಾರ್ ಅಭಿನಯದ ‘ ತಮಸ್ಸು ‘ ಚಿತ್ರದ ಚಿತ್ರಕಥೆಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

Comments are closed.