08 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ರೌಡಿ ವಿಕಾಶ್‌ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ!

ಉತ್ತರಪ್ರದೇಶ ರಾಜ್ಯದ ಕಾನ್ಪುರದಲ್ಲಿ ಕಳೆದ ವಾರ ರೌಡಿ ಶೀಟರ್‌ಗಳ ಬಂಧಿಸುವ ಪೊಲೀಸರ ಕಾರ್ಯಾಚರಣೆಯಲ್ಲಿ ರೌಡಗಳು ಪೊಲೀಸರ ವಿರುದ್ಧ ಗುಂಡು ಹಾರಿಸಿದ್ದರು. ಇದರಿಂದಾಗಿ  8 ಮಂದಿ ಪೊಲೀಸರು ಹತರಾಗಿದ್ದರು. ಈ ಪ್ರಕರಣದ ಮುಖ್ಯ ಆರೋಪಿಯಾಗಿರುವ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆಯ ಆಪ್ತ ಸ್ನೇಹಿತ ಅಮರ್ ದುಬೆಯನ್ನು ಹಮಿರ್‌ಪುರ್‌‌ನಲ್ಲಿ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಉತ್ತರಪ್ರದೇಶದ ಹಮಿರ್ಪುರ್ ನಲ್ಲಿ ಎಸ್’ಟಿಎಫ್ ಪಡೆ ಎನ್’ಕೌಂಟರ್ ನಡೆಸಿದ್ದು, ಅಮರ್ ದುಬೆಯನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.

60 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಖ್ಯಾತ ರೌಡಿ ಶೀಟರ್‌ ವಿಕಾಶ್‌ ದುಬೆ ಕಾನ್ಪುರ ಜಿಲ್ಲೆಯ ದಿಕ್ರು ಗ್ರಾಮದಲ್ಲಿ ತಲೆ ಮರೆಸಿಕೊಂಡಿರುವುದಾಗಿ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿಲು ಹೊರಟಿದ್ದರು. ಈ ಬಗ್ಗೆ ತಿಳಿದಿ ರೌಡಿಗಳ ಗುಂಪು ರಸ್ತೆಗಳಿಗೆ ಅಡ್ಡಲಾಗಿ ಕಲ್ಲಗಳನ್ನು ಜೋಡಿಸಿದ್ದರು. ಕಲ್ಲುಗಳನ್ನು ತೆರವುಗೊಳಿಸಲು ಪೊಲೀಸರು ರಸ್ತೆಗಿಳಿದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಗುಂಡಿನ ದಾಳಿಯಲ್ಲಿ ಪೆಟ್ಟು ತಿಂದ ಡಿವೈಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಸಾವನ್ನಪ್ಪಿದ್ದರು. ಕ್ರಿಮಿನಲ್ ಗಳು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು.  ಈ ಹಿಂದೆಯೂ ಪೊಲೀಸರ  ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದ ದುಬೆ ತಂದ ಅವುಗಳನ್ನೇ ಪೊಲೀಸರ ಮೇಲಿನ ದಾಳಿಯಲ್ಲಿ ಬಳಸಿದ್ದಾರೆ ಎಂದು ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಟಿಎಪ್‌ ತಂಡವನ್ನು ರಚಿಸಲಾಗಿದ್ದು, ರೌಡಿಗಳ ಭೇಟೆ ಬಿರುಸು ಪಡೆದುಕೊಂಡಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ರೌಡಿ ಶೀಟರ್‌ಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.


ಇದನ್ನೂ ಓದಿಪೊಲೀಸರ ಮೇಲೆ ರೌಡಿಶೀಟರ್‌ಗಳ ಗುಂಡಿನ ದಾಳಿ; 8 ಪೊಲೀಸರ ಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights