ಡ್ರಾಮಾ ಜೂನಿಯರ್ಸ್‌ ಮೇಲೆ ಪೇಜಾವರ ಶ್ರೀ ಕೆಂಗಣ್ಣು…?

ಉಡುಪಿ : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ಸ್‌ ಸೀಸನ್‌ 2ರಲ್ಲಿ ಬ್ರಾಹ್ಮಣರಿಗೆ ಹಾಗೂ ಅವರ ವೃತ್ತಿಗೆ ಅವಮಾನವಾಗುವ ರೀತಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಉಡುಪಿ ಪೇಜಾವರ ಮಠದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಯುವ ಬ್ರಾಹ್ಮಣ ಪರಿಷತ್‌ ನೇತೃತ್ವದಲ್ಲಿ ಖಂಡನಾ ನಿರ್ಣಯ ಹೊರಡಿಸಿದ್ದು, ಮುಂದಿನ ಸಂಚಿಕೆಯಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಗಿದೆ.

ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ವೃತ್ತಿಯನ್ನು ಅವಹೇಳನ ಮಾಡಲಾಗಿದೆ. ಇದು ನಮಗೆ ನೋವುಂಟುಮಾಡಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ. ಸಣ್ಣ ಮಕ್ಕಳ ಮನಸ್ಸಿನಸ್ಸಿ ವಿಷ ಬೀಜ ಬಿತ್ತುವ  ಕೆಲಸ ಮಾಡಬೇಡಿ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಕ್ಷಮೆ ಯಾಚಿಸದಿದ್ದರೆ ತೀವ್ರ ಪ್ರತಿಭಟನೆ ಮಾಡುವುದಾಗಿ ಪೇಜಾವರ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

 

Comments are closed.

Social Media Auto Publish Powered By : XYZScripts.com