ಬಿಎಂಟಿಸಿ ಮಾಸಿಕ ವೋಲ್ವೋ ಪಾಸ್‌ ದರದಲ್ಲಿ ಶೇ.10 ಇಳಿಕೆ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಎಂಟಿಸಿ ವೋಲ್ವೋ ಬಸ್‌ ಪ್ರಯಾಣಿಕರಿಗೊಂದು ಸಿಹಿಸುದ್ದಿ. ಬಿಎಂಟಿಸಿ ಮಾಸಿಕ ವೋಲ್ವೊ ಬಸ್ ಪಾಸ್ ದರದಲ್ಲಿ ಶೇ.10ರಷ್ಟು ಇಳಿಕೆಯಾಗಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅನುಮೋದನೆ ನೀಡಿದ್ದಾರೆ. ಇನ್ನು ಬಿಎಂಟಿಸಿ ದರ ಪರಿಷ್ಕರಣೆಯ ದಿನಾಂಕ ನಿಗಧಿಪಡಿಸಬೇಕಿದೆ.

41 ಆಸನಗಳ ವೋಲ್ವೋ ಬಸ್ ಪಾಸ್‌ 120 ಕಿ.ಮೀ ಪಾಸ್‌ ದರ

ಹಿಂದಿನ ದರ – 3910

ಪರಿಷ್ಕೃತ ದರ – 3570

ಪ್ರತಿದಿನ ಗರಿಷ್ಟ 160 ಕಿಲೋಮೀಟರ್ ಸಂಚಾರದ 41 ಸೀಟ್‌ಗಳ ಪಾಸ್‌ ದರ

ಹಿಂದಿನ ದರ – 4197
ನೂತನ ದರ – 3832

35 ಸೀಟ್‌ಗಳ ಹೊಸ ವೋಲ್ವೋ 120 ಕಿ.ಮೀ ಬಸ್ ಪಾಸ್ ದರ

ಹಿಂದಿನ ದರ – 4312.5
ನೂತನ ದರ – 3780

ಪ್ರತಿದಿನ 160 ಕಿಮೀ ಸಂಚರಿಸುವ 35 ಸೀಟ್‌ಗಳ ಬಸ್ ಪಾಸ್ ದರ

ಹಿಂದಿನ ದರ – 4600
ನೂತನ ದರ – 3990