ಕುರುಕ್ಷೇತ್ರ ಯುದ್ಧದಲ್ಲಿ ಪರಾಕ್ರಮ ಮೆರೆಯಬೇಕೆಂಬ ಆಸೆಯಂತೆ ಈ ನಟನಿಗೆ ….

ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರ ಮಾಡಿ, ಬಾಹುಬಲಿ ಯಶಸ್ಸಿನಲ್ಲಿ ಪಾಲುದಾರನಾಗಿದ್ದ ನಟ ರಾಣಾ ದಗ್ಗುಬಾಟಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ.

ಇತ್ತೀಚೆಗಷ್ಟೇ ರಾಣಾ ತಮ್ಮ ಮುಂದಿನ ಸಿನಿಮಾ ನೇನೇ ರಾಜ ನೇನೇ  ಮಂತ್ರಿ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ದರ್ಶನ್‌ ಅವರ ಸಿನಿಮಾ ಕುರುಕ್ಷೇತ್ರದಲ್ಲಿ ಸಿನಿಮಾದಲ್ಲಿ ನಟಿಸಲು ಆಸಕ್ತಿಯಿದೆ. ಅವರು ಕರೆದರೆ ಖಂಡಿತ ನಟಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಹಿಂದೆ ರಾಣಾ ದಗ್ಗುಬಾಟಿ ಕುರುಕ್ಷೇತ್ರ ಸಿನಿಮಾದಲ್ಲಿ  ಭೀಮನ ಪಾತ್ರ ಮಾಡುವುದಾಗಿ  ಗಾಂಧಿನಗರದಲ್ಲಿ ಗಾಳಿ ಸುದ್ದಿ ಹಬ್ಬಿತ್ತು. ಆದರೆ ಈ ಕುರಿತು ರಾಣಾ ಸ್ಪಷ್ಟೀಕರಣ ನೀಡಿದ್ದು, ಕುರುಕ್ಷೇತ್ರ ಸಿನಿಮಾದ ಬಗ್ಗೆ ತಿಳಿದಿದೆ. ಆದರೆ ಅದರಲ್ಲಿ ಯಾವುದೇ ಪಾತ್ರ ಮಾಡಲು ನನಗೆ ಆಫರ್‌ ಬಂದಿಲ್ಲ ಎಂದಿದ್ದಾರೆ.

 

ಕನ್ನಡ ಸಿನಿಮಾದಲ್ಲಿ ಯಾವುದೇ ಪಾತ್ರ ಕೊಟ್ಟರೂ ಮಾಡಲು ಸಿದ್ದ, ಅಂತಹಾ ಆಫರ್‌ಗಳು ಬಂದರೆ ಖಂಡಿತ ತಿರಸ್ಕರಿಸುವುದಿಲ್ಲ ಎಂದಿದ್ದಾರೆ. ಈಗಾಗಲೆ ಭೀಮನ ಪಾತ್ರಕ್ಕೆ ಹಿಂದಿ  ನಟ ಆಯ್ಕೆಯಾಗಿದ್ದು, ಅರ್ಜುನನ ಪಾತ್ರ ಮಾತ್ರ ಖಾಲಿ ಇದೆ. ಆದರೆ ಆ ಪಾತ್ರವನ್ನು ಕನ್ನಡದವರಿಗೆ ನೀಡಬಹುದು ಎಂದಿದ್ದಾರೆ.

ಎ.ಎಂ.ಆರ್‌ ರಮೇಶ್‌ ನಿರ್ದೇಶನದ ಕನ್ನಡದ ಆಸ್ಫೋಟ ಸಿನಿಮಾದಲ್ಲಿ ರಾಣಾ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಣಾ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com