ಸುದೀಪ್ ಗೆ ಟಾಲಿವುಡ್ ನಿಂದ ಆಫರ್, ಯಾವ ಸಿನೆಮಾ..? ಏನಂದ್ರು ಕಿಚ್ಚ..? ಇಲ್ಲಿದೆ ಡೀಟೇಲ್ಸ್

ಸುದೀಪ್ ರಾಷ್ಟ್ರಮಟ್ಟದಲ್ಲಿ ಬೆಳೆದು ನಿಂತ ಕನ್ನಡದ ನಾಯಕ ನಟ. ಈ ಕಲಾವಿದನಿಗೆ ಈಗ ಮತ್ತೊಂದು ಆಫರ್ ಬಂದಿದೆ. ಸ್ವತಂತ್ರಕ್ಕಾಗಿ ಹೋರಾಡಿದ ಮೊಟ್ಟ ಮೊದಲ ಸ್ವತಂತ್ರ ಹೋರಾಟಗಾರನ ಕಥೆಯ ಚಿತ್ರದಲ್ಲಿ ಅಭಿನಯಿಸೋಕೆ ಕಿಚ್ಚನಿಗೆ ಅವಕಾಶ ಹುಡುಕಿಕೊಂಡು ಬಂದಿದೆ. ಆದರೆ, ಕಿಚ್ಚ ಅದನ್ನ ಒಪ್ಪಿದರಾ..?  ಇಲ್ಲವಾ..? ಬನ್ನಿ, ಹೇಳ್ತೀವಿ.

ಉಯ್ಯಾಲವಾಡ ನರಸಿಂಹ ರೆಡ್ಡಿ. ಇದು ಯಾರು…? ಈ ಹೆಸರು ಎಲ್ಲೋ ಕೇಳಿದಂಗಿದೆ ಅಲ್ಲ. ಹೌದು..! ನಿಮ್ಮ ಊಹೆ ಸರಿ ಇದೆ. ಕಳೆದ ಕೆಲವು ತಿಂಗಳಿನಿಂದ ಮೆಗಾ ಸ್ಟಾರ್ ಚಿರಂಜೀವಿ ಸುತ್ತವೇ ಈ ಹೆಸರು ಕೇಳ್ತಿ ಬರ್ತಿರೋದು. ಟಾಲಿವುಡ್ ನಲ್ಲಿ ಈ ಸೂಪರ್ ಸ್ಟಾರ್ ಈ ಕಥೆಯನ್ನ ಮಾಡ್ತಿದ್ದಾರೆ. ಉಯ್ಯಾಲವಾಡ ನರಸಿಂಹ ರೆಡ್ಡಿ ಆಗಿ ಕಂಗೊಳಿಸಲಿದ್ದಾರೆ.
ಯಾರ್ ಈ ಉಯ್ಯಾಲವಾಡ ನರಸಿಂಹ ರೆಡ್ಡಿ !

Image result for sudeep tollywood hd

ಉಯ್ಯಾಲವಾಡ ನರಸಿಂಹ ರೆಡ್ಡಿ ಯಾರೂ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರವನ್ನೂ ಕೊಡ್ತೇ ನೋಡಿ. 1813 ರಿಂದ 1847 ಅವಧಿಯಲ್ಲಿ ಬ್ರಿಟೀಷರ ಆಳ್ವಿಕೆ ಇತ್ತು. ಆಗ ಉಯ್ಯಾಲವಾಡದ ನರಸಿಂಹ ರೆಡ್ಡಿ ಸ್ವತಂತ್ರಕ್ಕಾಗಿ ಹೋರಾಡಿದರು. ಬ್ರಿಷರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಒಂದ್ ವಿಷಯ. ಉಯ್ಯಾಲವಾಡ ನರಸಿಂಹ ರೆಡ್ಡಿ ಭಾರತದ ಮೊದಲ ಸ್ವತಂತ್ರ ಹೋರಾಟಗಾರ.
ಉಯ್ಯಾಲವಾಡ ಚಿತ್ರದಲ್ಲಿ ಕಿಚ್ಚನಿಗೆ ಆಫರ್ !
ಹೌದು..! ಕಿಚ್ಚ ಸುದೀಪ್ ಗೆ ಬಂದ ಚಿತ್ರದ ಆಫರ್ ಇದೇನೇ. ಮೇಗಾ ಸ್ಟಾರ್ ಚರಂಜೀವಿ ಜತೆ ಅಭಿನಯಿಸೋ ಅವಕಾಶ ಇದು. ಇದನ್ನ ಸುದೀಪ್ ಬೇಡ ಅಂದ್ರೋ.. ಇಲ್ಲ ಒಪ್ಪಿಕೊಂಡ್ರೋ. ಇದನ್ನ ಹೇಳ್ತೀವಿ ಬನ್ನಿ. ಚಿತ್ರತಂಡ ಕಿಚ್ಚನಿಗೆ 50 ದಿನದ ಡೇಟ್ಸ್ ಕೇಳಿದೆ.

ಇದು ನಿಜ. ಗಾಸಿಪ್ ಅಲ್ವೇ ಅಲ್ಲ. ಸುದೀಪ್ ಗೆ ಆಫರ್ ಬಂದಿದೆ. ಅದನ್ನ ತಳ್ಳಿ ಹಾಕದ ಸುದೀಪ್ ಕಥೆ ಕೇಳಿದ್ದಾರೆ. ಪಾತ್ರವನ್ನೂ ಆಲಿಸಿದ್ದಾರೆ. ಎರಡೂ ಇಷ್ಟವಾಗಿವೆ. ಚಿತ್ರ ತಂಡವೂ 50 ದಿನ  ಡೇಟ್ಸ್ ಬೇಕು ಅಂದಿದ್ದಾರೆ. ಆದರೆ, ಸುದೀಪ್ ಈಗ ಇನ್ನೂ ಯೋಚನೆ ಮಾಡ್ತಿದ್ದಾರೆ. ಕಾರಣ ಇಲ್ಲಿದೆ ನೋಡಿ.
50 ದಿನದ ಡೇಟ್ಸ್ ಒಂದೇ ಸ್ಕೆಡ್ಯೂಲ್​ ನಲ್ಲಿ ಅಲ್ಲವೇ ಅಲ್ಲ
ತಿಂಗಳಿಗೆ 5,10,15 ಹಿಂಗೆ ಡೇಟ್ಸ್ ಕೇಳ್ತಿದ್ದಾರೆ ಚಿತ್ರ ತಂಡ
ಈ ಥರ ಡೇಟ್ಸ್ ಕೇಳಿದ್ದಕೇನೆ ಸುದೀಪ್ ಯೋಚನೆ ಮಾಡ್ತಿರೋದು.ಯಾಕೆಂದ್ರೆ, ಕನ್ನಡದ ದೊಡ್ಡ ಚಿತ್ರಗಳನ್ನ ಸುದೀಪ್ ಈಗ ಒಪ್ಪಿದ್ದಾರೆ. ದಿ ವಿಲನ್ ಆ ಸಾಲಿನ ಒಂದು ಸಿನಿಮಾ. ಕೋಟಿಗೊಬ್ಬ-3 ಚಿತ್ರಕ್ಕೂ ಡೇಟ್ಸ್ ಬ್ಲಾಕ್ ಆಗಿವೆ. ಹೆಬ್ಬುಲಿ ಕೃಷ್ಣ ಕೂಡ ಕಿಚ್ಚನಿಗೆ ಕಥೆ ಬರೀತಿದ್ದಾರೆ. ಹಿಂಗಿರೋವಾಗ ಉಯ್ಯಾಲವಾಡ ನರಸಿಂಹರೆಡ್ಡಿ ಚಿತ್ರಕ್ಕೆ ಡೇಟ್ಸ್ ಕೊಟ್ರೆ ಕನ್ನಡ ಚಿತ್ರಗಳಿಗೆ ಡೇಟ್ಸ್ ವ್ಯತ್ಯಾಸ ಆಗೋದು ಗ್ಯಾರಂಟಿ.

Related image

ಆದರೆ, ಸುದೀಪ್ ಇದೆಲ್ಲದಕ್ಕೂ ಹೆಚ್ಚಾಗಿ ಕನ್ನಡ ಸಿನಿಮಾಗಳ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಕನ್ನಡ ಸಿನಿಮಾಗಳಿಗೆ ತೊಂದರೆ ಆಗೋ ಹಂಗಿದ್ದರೇ ಮೋಸ್ಟ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರ ಒಪ್ಪಿಕೊಳ್ಳೋದು ಡೌಟು. ಹಾಗಂತ ಇದನ್ನ ನಾವ್ ಹೇಳ್ತಿಲ್ಲ. ಸ್ವತ: ಸುದೀಪ್ ಹೇಳಿಕೊಂಡದ್ದು ಇದೆ.

ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಯಾವ ಪಾತ್ರ ಮಾಡ್ತಾರೆಂಬ ಪ್ರಶ್ನೆಗಳೂ ಇದ್ದವು. ಅದರ ಸುತ್ತ ಅಂತೆ-ಕಂತೆಗಳೂ ಹುಟ್ಟಿಕೊಂಡಿದ್ದವು. ಸುದೀಪ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡ್ತಾರಂತೆ ಅನ್ನೋ ಸುದ್ದಿ ಒಂದು ಕಡೆ ಆಗಿದ್ದರೆ, ಇನ್ನೊಂದು ಕಡಗೆ ಸುದೀಪ್ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡ್ತಾರೆ ಅನ್ನೋದೂ ಇತ್ತು. ಎಲ್ಲದಕ್ಕೂ ಸ್ವತ: ಸುದೀಪ್ ತೆರೆ ಎಳೆದಿದ್ದಾರೆ. ಚಿತ್ರ ತಂಡದಿಂದ ಒಂದ್ ಮಹತ್ವದ ಮತ್ತು ಪ್ರಮುಖ ಪಾತ್ರವೇ ಸುದೀಪ್ ರನ್ನ ಹುಡುಕಿಕೊಂಡು ಬಂದಿದೆ. ಆದರೆ, ಸುದೀಪ್ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ವೇಟ್.

2 thoughts on “ಸುದೀಪ್ ಗೆ ಟಾಲಿವುಡ್ ನಿಂದ ಆಫರ್, ಯಾವ ಸಿನೆಮಾ..? ಏನಂದ್ರು ಕಿಚ್ಚ..? ಇಲ್ಲಿದೆ ಡೀಟೇಲ್ಸ್

 • October 18, 2017 at 12:01 PM
  Permalink

  It is actually a nice and useful piece of info. I’m happy that you simply shared this helpful info with us. Please keep us informed like this. Thanks for sharing.

 • October 24, 2017 at 2:47 PM
  Permalink

  We stumbled over here from a different page and thought
  I may as well check things out. I like what I see so now i am following you.
  Look forward to going over your web page for a second time.

Comments are closed.

Social Media Auto Publish Powered By : XYZScripts.com