ಅಪ್ಪ ವಿಡಿಯೋಗೇಮ್ ಕೊಡಿಸದಿದ್ದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ್ದೇನು..?

ಹೈದರಾಬಾದ್ ನಲ್ಲಿ ಹದಿಹರೆಯದ ಹುಡುಗನೊಬ್ಬ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 17 ವರ್ಷದ ಜಿ ಅಬಿನಯ್ ಇಂಜಿನಿಯರಿಂಗ್ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದ. ಕೆಲದಿನಗಳಿಂದ ಮನೆಯಲ್ಲಿ ಅಪ್ಪನಿಗೆ ‘ ವಿಡಿಯೋ ಗೇಮ್ ಕೊಡಿಸಿ ‘ ಎಂದು ದುಂಬಾಲು ಬಿದ್ದಿದ್ದಾನೆ. ವಿಡಿಯೋ ಗೇಮ್ ಕೊಡಿಸಿದರೆ ಓದು ಹಾಳಾಗುತ್ತದೆ ಎಂದು ಅಪ್ಪ ಬೇಡ ಎಂದಿದ್ದರು. ಅಮ್ಮ ಕೂಡ, ‘ಮನೆಗೆ ತುಂಬಾ ದುಡ್ಡು ಖರ್ಚಾಗಿದೆ, ಸ್ವಲ್ಪ ದಿನ ಕಾಯಿ’ ಎಂದು ಹೇಳಿದ್ದರು.  3000 ರೂಗಳ ವಿಡಿಯೋ ಗೇಮ್ ಬೇಕೇ ಬೇಕು ಎಂದು ಹಠ ಹಿಡಿದ ಹುಡುಗ, ಕೊಡಿಸದಿದ್ದರೆ ಸುಸೈಡ್ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾನೆ.

ಸೋಮವಾರ ಈ ಸಂಬಂಧ ಮನೆಯಲ್ಲಿ ವಾದಿಸಿದ ಅಭಿನಯ್, ಕೈ ಕತ್ತರಿಸಿಕೊಳ್ಳುವುದಾಗಿ ಹೆದರಿಸಿದ್ಧಾನೆ. ನಂತರ ಮಹಡಿ ಮೇಲೆ ತೆರಳಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೇವಲ ವಿಡಿಯೋ ಗೇಮ್ ಗೋಸ್ಕರ ಆತ್ಮಹತ್ಯೆ ಮಾಡಿಕೊಳ್ಳವುದು ಆಘಾತಕಾರಿ ಸಂಗತಿ ಎಂದು ಪೋಲೀಸರು ಹೇಳಿದ್ದಾರೆ.

2 thoughts on “ಅಪ್ಪ ವಿಡಿಯೋಗೇಮ್ ಕೊಡಿಸದಿದ್ದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ್ದೇನು..?

  • October 25, 2017 at 10:05 AM
    Permalink

    Great weblog here! Additionally your site so much up fast!
    What host are you the usage of? Can I am getting your associate hyperlink for your host?
    I desire my website loaded up as quickly as yours lol

Comments are closed.