ಬಿಜೆಪಿ ಸೇರ್ತಾರಾ ರಜನೀಕಾಂತ್‌ ? : ಬಿಜೆಪಿ ನಾಯಕಿ ಪೂನಂ, ರಜನಿ ಭೇಟಿಯ ಉದ್ದೇಶವಾದರೂ ಏನು?

ಚೆನ್ನೈ : ತಮಿಳಿನ ಸೂಪರ್‌ಸ್ಟಾರ್‌ ರಜನೀಕಾಂತ್‌ ರಾಜಕೀಯ ಎಂಟ್ರಿ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬುತ್ತಿರುವ ಬೆನ್ನಲ್ಲೇ, ಭಾನುವಾರ ಬಿಜೆಪಿಯ ಪೂನಂ ಮಹಜನ್‌, ರಜನೀಕಾಂತ್‌ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ರಜನೀಕಾಂತ್‌ ಬಿಜೆಪಿ ಸೇರ್ಪಡೆಯ ಗಾಳಿಸುದ್ದಿ ನಿಜವಾಗುವಂತೆ ಕಾಣುತ್ತಿದೆ. ಆದರೆ ಈ ಭೇಟಿ ರಾಜಕೀಯ ಉದ್ದೇಶಿತ ಅಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಮುಂಬೈನ ಸಂಸದೆಯಾಗಿರುವ ಪೂನಂ ಅವರನ್ನು ರಜನೀಕಾಂತ್‌ ತಮ್ಮ ಚೆನ್ನೈನ ನಿವಾಸದಲ್ಲಿ ಭೇಟಿಯಾಗಿದ್ದಾರೆ. ರಜನೀಕಾಂತ್‌ರಂತಹ ನಟರನ್ನು ಭೇಟಿಯಾಗಿದ್ದು ನಿಜಕ್ಕೂ ಸಂತೋಷವಾಯಿತು. ವೈಯಕ್ತಿಕವಾಗಿಯೂ ಅವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರಿಗೆ ನನ್ನ ತಂದೆ ಪರಿಚಯಸ್ಥರು ಎಂದು ಪೂನಂ ಹೇಳಿದ್ದಾರೆ. ಆದರೆ ಅವರು ರಾಜಕೀಯ ವಿಚಾರವಾಗಿ ಭೇಟಿಯಾಗಿದ್ದರೋ ಇಲ್ಲವೋ ಎಂಬುದರ  ಬಗ್ಗೆ ಮಾಹಿತಿ ನೀಡಿಲ್ಲ.

 

ಕಳೆದ ಮೇ ನಲ್ಲಿ ರಜನೀಕಾಂತ್‌ ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದರು. ದೇವರು ಮನಸ್ಸು ಮಾಡಿದರೆ ನಾನು ನಾಳೆಯೇ ರಾಜಕೀಯಕ್ಕೆ ಬರುತ್ತೇನೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಅವರ ಪ್ರತಿಯೊಂದು ನಡೆಯೂ ಕುತೂಹಲ ಕೆರಳಿಸುತ್ತಿದೆ.

One thought on “ಬಿಜೆಪಿ ಸೇರ್ತಾರಾ ರಜನೀಕಾಂತ್‌ ? : ಬಿಜೆಪಿ ನಾಯಕಿ ಪೂನಂ, ರಜನಿ ಭೇಟಿಯ ಉದ್ದೇಶವಾದರೂ ಏನು?

  • October 18, 2017 at 4:16 PM
    Permalink

    Priligy Alcol viagra Cephalexin Altace Zyprexa Positive Direct Coombs Kamagra Oral Jelly Review Viagra Liquida

Comments are closed.