ಭೂಮಿಯನ್ನು ರಕ್ಷಿಸಲು ಹೊರಟ ಹುಡುಗನಿಗೆ NASA ನೀಡಿದ ಉತ್ತರ

ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, NASA (National Aeronautics and Space Administration) ದವರು ಕೆಲದಿನಗಳ ಹಿಂದೆ ಒಂದು ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದರು. ‘ ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್ ‘ ಎಂಬ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದರು. ಈ ಹುದ್ದೆಯಲ್ಲಿರುವವರು ಮಾಡಬೇಕಿರುವ ಕೆಲಸ ಏನೆಂದರೆ ನಾವೆಲ್ಲರೂ ವಾಸಿಸುತ್ತಿರುವ ಭೂಮಿಯನ್ನು ಅನ್ಯಗ್ರಹ ಜೀವಿ (ಏಲಿಯನ್) ಗಳಿಂದ ರಕ್ಷಿಸುವುದು. ಅರ್ಹತೆಯಿರುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದೆಂದು ನಾಸಾ ಹೇಳಿಕೊಂಡಿತ್ತು.  ಈ ಕೆಲಸಕ್ಕೆ ಒಂಬತ್ತು ವರ್ಷದ ಹುಡುಗನೊಬ್ಬ ಅರ್ಜಿ ಗುಜರಾಯಿಸಿದ್ದಾನೆ. 4ನೇ ತರಗತಿಯಲ್ಲಿ ಓದುತ್ತಿರುವ ಜಾಕ್ ಡೇವಿಸ್ ಎಂಬ ವಿದ್ಯಾರ್ಥಿ ನಾಸಾ ಸಂಸ್ಥೆಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿ ಪತ್ರ ಬರೆದಿದ್ದಾನೆ. ತಾನು ಆ ಕೆಲಸ ಮಾಡಲು ಅರ್ಹನೆಂಬುದನ್ನೂ ಆತ ಹೇಳಿಕೊಂಡಿದ್ದಾನೆ.

  Image result for jack davis nasa Image result for jack davis nasa

‘ ನಾನು ಕೇವಲ 9 ವರ್ಷದವನಾಗಿರಬಹುದು, ಆದರೆ ನಾನು ಈ ಕೆಲಸಕ್ಕೆ ಯೋಗ್ಯನಾಗಿದ್ದೇನೆ. ಏಕೆಂದರೆ, ನನ್ನ ಅಕ್ಕ ನನ್ನನ್ನು ಏಲಿಯನ್ ಎಂದು ಕರೆಯುತ್ತಾಳೆ. ನಾನು ಸ್ಪೇಸ್ ಹಾಗೂ ಏಲಿಯನ್ ಸಂಬಂಧಿತ ಎಲ್ಲಾ ಚಿತ್ರಗಳನ್ನು ವೀಕ್ಷಿಸಿದ್ದೇನೆ. ನಾನು ವಿಡಿಯೋ ಗೇಮ್ ಗಳನ್ನು ಆಡುವುದರಲ್ಲಿಯೂ ಪರಿಣಿತನಾಗಿದ್ದೇನೆ. ಆದ್ದರಿಂದ ನಾನು ಏಲಿಯನ್ ಗಳಂತೆ ಯೋಚಿಸುವುದನ್ನೂ ಕಲಿಯಬಲ್ಲೆ – ನಿಷ್ಠಾವಂತ ಜಾಕ್ ಡೇವಿಸ್, ಗಾರ್ಡಿಯನ್ ಆಫ್ ಗ್ಯಾಲಕ್ಸಿ, 4ನೇ ತರಗತಿ  ‘ ಎಂದು ಪತ್ರದಲ್ಲಿ ಹೇಳಿಕೊಂಡಿದ್ಧಾನೆ.

letter to nasa reddit

ಹುಡುಗನ ಈ ಅರ್ಜಿಗೆ ನಾಸಾ ಉತ್ತರವನ್ನೂ ಕೊಟ್ಟಿದೆ. ನಾಸಾದ ಗ್ರಹ ವಿಜ್ಞಾನ ವಿಭಾಗದ ನಿರ್ದೇಶಕ ಜೇಮ್ಸ್ ಎಲ್ ಗ್ರೀನ್, ಹುಡುಗನಿಗೆ ಪತ್ರ ಬರೆದು ಪ್ರತಿಕ್ರಿಯೆ ನೀಡಿದ್ದಾರೆ.

Image result for jack davis nasa

‘ ಪ್ರೀತಿಯ ಜಾಕ್, ನೀನು ಗಾರ್ಡಿಯನ್ ಆಫ್ ಗ್ಯಾಲಕ್ಸಿ ಎಂದು ಕೇಳಲ್ಪಟ್ಟೆ. ನಿನಗೆ ನಾಸಾದ ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್ ಆಗುವ ಆಸಕ್ತಿಯಿದೆಯೆಂದು ತಿಳಿಯಿತು. ಗ್ರೇಟ್.. ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್ ಹುದ್ದೆ ತುಂಬ ಮಹತ್ವವಾದದ್ದಾಗಿದೆ. ನಾವು ಚಂದ್ರ, ಮಂಗಳ ಹಾಗೂ ಇತರ ಆಕಾಶ ಕಾಯಗಳಿಂದ ಸ್ಯಾಂಪಲ್ ಗಳನ್ನು ತಂದಾಗ ಅದರಲ್ಲಿರಬಹುದಾದ ಸೂಕ್ಷ್ಮ ಜೀವಿಗಳಿಂದ ಭೂಮಿಗೆ ಯಾವುದೇ ಅಪಾಯವಾಗದಂತೆ ತಡೆಯುವುದು ಅದರ ಮುಖ್ಯ ಉದ್ದೇಶ. ಹಾಗೂ ನಮ್ಮಲ್ಲಿರುವ ಕೀಟಾಣುಗಳಿಂದ ಅನ್ಯಗ್ರಹ ಜೀವಿಗಳಿಗೆ ಅಪಾಯವಾಗದಂತೆ ತಡೆಯುವುದು ಸಹ ನಮ್ಮ ಜವಾಬ್ದಾರಿಯಾಗಿದೆ. ನಾವು ಪ್ರತಿಭಾವಂತ ವಿಜ್ಞಾನಿಗಳು, ಇಂಜಿನಿಯರ್ ಗಳಿಗಾಗಿ ಇದಿರು ನೋಡುತ್ತಿದ್ದೇವೆ. ನೀನು ಚೆನ್ನಾಗಿ ಓದಿ, ಶಾಲೆಯಲ್ಲಿ ಉತ್ತಮ ನಿರ್ವಹಣೆ ತೋರುತ್ತೀಯ ಎಂದು ನಿರೀಕ್ಷಿಸುತ್ತೇವೆ, ನಾವು ನಿನ್ನನ್ನು ನಾಸಾ ಕೇಂದ್ರದಲ್ಲಿ ನೋಡಲು ಬಯಸುತ್ತೇವೆ ‘ ಎಂದು ಜೇಮ್ಸ್ ಎಲ್ ಗ್ರೀನ್ ಪತ್ರ ಬರೆದಿದ್ದಾರೆ.

Comments are closed.

Social Media Auto Publish Powered By : XYZScripts.com