ಲಂಡನ್ : ಕಂಚಿನ ಪದಕದೊಂದಿಗೆ ವೃತ್ತಿಜೀವನಕ್ಕೆ ಉಸೇನ್ ಬೋಲ್ಟ್ ವಿದಾಯ

ಆತ 100 ಮೀಟರ್​ ರೇಸ್​​ನ ಕಿಂಗ್​.. ವಿಶ್ವ ದಾಖಲೆಗಳ ಒಡೆಯ.. ಯುವ ಓಟಗಾರರಿಗೆ ರೋಲ್ಡ್​ ಮಾಡಲ್​.. ಆತ ತನ್ನ ಕೊನೆಯ ರೇಸ್​​ನಲ್ಲಿ ಬಂಗಾರದೊಂದಿಗೆ ಮುಗಿಸುವ ಯೋಜನೆಯನ್ನು ಹೆಣೆದುಕೊಂಡಿದ್ದ ಸ್ಟಾರ್​.. ಆದ್ರೆ ಆತನಿಗೆ ಹೀಗೆ ಆಗಬಹುದು ಎಂದು ಊಹಿಸಿರಲಿಲ್ಲ.. ಆದ್ರೆ ಅದು ನಡೆದು ಹೋಗಿದೆ..
ಎಸ್​​.. ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್​​​ ಚಾಂಪಿಯನ್​ಶಿಪ್​ ಉಸೇನ್​ ಬೋಲ್ಟ್​ ಪಾಲಿಗೆ ಕೊನೆಯ ರೇಸ್​.. ಹೀಗಾಗಿಯೇ ಮಾಧ್ಯಮಗಳು ಸಹ ಈ ರೇಸ್​​ಗೆ ದೊಡ್ಡ ಹೈಪ್​ ನೀಡಿದ್ದವು.. ಆದರೆ ಈ ರೇಸ್​​ನಲ್ಲಿ ಜಮೈಕಾದ ಉಸೇನ್​ ಬೋಲ್ಟ್​​ ಚಿನ್ನದ ನಗೆಯನ್ನು ಬೀರುವಲ್ಲಿ ವಿಫಲರಾಗಿದ್ದಾರೆ.. ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಟ್ರಿಪಲ್ ಟ್ರಿಪಲ್ ಸಾಧನೆಯನ್ನು ಮಾಡಿದ ಮೋಡಿಗಾರ..
ಲಂಡನ್​ನಲ್ಲಿ ನಡೆದ 100 ಮೀಟರ್​ ಓಟದಲ್ಲಿ ಉಸೇನ್​ ಬೋಲ್ಟ್​​ ಚಿನ್ನದ ನಗೆ ಬೀರುವಲ್ಲಿ ಎಡವಿದ್ದಾರೆ.. ಆದ್ರೆ ಬಹುದಿನಗಳಿಂದ ಉಸೇನ್​ ಅವರನ್ನು ಹಿಂದಿಕ್ಕೆ ಚಿನ್ನದ ಸಾಧನೆಯನ್ನು ಮಾಡುವ ಅಮೆರಿಕದ ಜಸ್ಟಿನ್​ ಗ್ಯಾಟ್ಲಿನ್ ಅವರ ಕನಸು ನನಸಾಗಿದೆ.. ಈ ರೇಸ್​​ನಲ್ಲಿ ಉಸೇನ್​ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ..

Image result for usain bolt race 100m final result

ಶನಿವಾರ ತಡ ರಾತ್ರಿ ನಡೆದ ಫೈನಲ್​ ರೇಸ್​​ನಲ್ಲಿ ಜಸ್ಟೀನ್​​ ಗ್ಯಾಟ್ಲಿನ್​​ ನಿಗದಿತ ಕ್ರಮವನ್ನು 9.92 ಸೆಕೆಂಡ್​​ಗಳಲ್ಲಿ ಕ್ರಮಿಸಿ ಬಂಗಾರದ ನಗೆ ಬೀರಿದ್ದಾರೆ.. ಇನ್ನು ಅಮೆರಿಕದ ಕ್ರಿಸ್ಟಿಯನ್​ 9.94ರ ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ತಮ್ಮದಾಗಿಸಿಕೊಂಡ್ರೆ, ಉಸೇನ್​ ಬೋಲ್ಟ್​​ 9.95 ಸೆಕೆಂಡ್​​​ಗಳಲ್ಲಿ ಕ್ರಮಿಸಿ ಕಂಚನ್ನು ತಮ್ಮದಾಗಿಸಿಕೊಂಡಿದ್ದಾರೆ..
ಉಸೇನ್​ ವಿಶ್ವಚಾಂಪಿಯನ್​ಶಿಪ್​​ನಲ್ಲಿ 11 ಬಂಗಾರದ ಪದಕವನ್ನು ಗೆದ್ದು ಬೀಗಿದ್ದರು.. ಆದ್ರೆ 100 ಮೀಟರ್​ ರೇಸ್​​ನಲ್ಲಿ ಸ್ವರ್ಣದ ಗೆರೆಯನ್ನು ಮುಟ್ಟುವಲ್ಲಿ ಉಸೇನ್​ ವಿಫಲರಾಗಿದ್ದಾರೆ.. ಇನ್ನೇನಿದ್ದರು ರೀಲೆಯಲ್ಲಿ ಹೇಗೆ ಆಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ..

Comments are closed.

Social Media Auto Publish Powered By : XYZScripts.com