ಐಟಿ ರೇಡ್‌ : ಡಿಕೆಶಿ ಮಾವನ ಮನೆಯಲ್ಲಿ ಸಿಕ್ಕಿರುವುದಾದರೂ ಏನು ?

ಮೈಸೂರು: ಮೈಸೂರಿನಲ್ಲಿರುವ ಸಚಿವ ಡಿಕೆ ಶಿವಕುಮಾರ್ ಮಾವ ತಿಮ್ಮಯ್ಯ ಮನೆ ಮೇಲೆ ಐಟಿ ಅಧಿಕಾರಿಗಳ ದಾಖಲೆ ಪರಿಶೀಲನೆ ಕಾರ್ಯ ಮುಂದುವರಿದಿದೆ. ಸತತ 72 ಗಂಟೆಗಳ ಸುಧೀರ್ಘ ದಾಖಲೆ ಪರಿಶೀಲನೆ ನಡೆಸಲಾಗಿದ್ದು, ತಿಮ್ಮಯ್ಯ ನಿವಾಸದಲ್ಲಿ ಸಿಕ್ಕಿರೋದ್ದಾದ್ರು ಏನು? ಎಂಬ ಪ್ರಶ್ನೆ ಉದ್ಬವವಾಗಿದೆ.

ಈ ಮಧ್ಯೆ ಸಚಿವ ಡಿಕೆಶಿಗೆ ಸಂಬಂಧಿಸಿದ ದಾಖಲೆಗಳನ್ನು ಮಾವನ ಮನೆಯಲ್ಲಿ ಸುರಕ್ಷಿತವಾಗಿ ಇಡಲಾಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದ್ದು, 4 ದಿನಗಳ ಕಾಲ ಪರಿಶೀಲನೆ ಮಾಡುವಷ್ಟು ದಾಖಲೆಗಳು ತಿಮ್ಮಯ್ಯ ಮನೆಯಲ್ಲಿವೆಯಾ ಎಂಬ ಪ್ಱಶ್ನೆ ಮೂಡಿದೆ.
ಮತ್ತೊಂದೆಡೆ ಹಾಸನದಲ್ಲೂ  ಐಟಿ ತಪಾಸಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಡಿಕೆಶಿ ‌ಆಪ್ತ ಸಚಿನ್ ನಾರಾಯಣ್ ಸಹೋದರನ ಮನೆಯಲ್ಲಿ  ದಾಖಲೆಗಳ ಪರಿಶೀಲನೆ ಬಹುತೇಕ ಪೂರ್ಣಗೊಂಡಿದ್ದು, ಮೇಲಧಿಕಾರಿಗಳ ಅನುಮತಿಗೆ ಐಟಿ ಅಧಿಕಾರಿಗಳು ಕಾಯುತ್ತಿರುವುದಾಗಿ ಹೇಳಲಾಗುತ್ತಿದೆ.

Comments are closed.