ಬೆಳಗಾವಿ : ಮಠಾಧೀಶರ ವಾಗ್ದಾಳಿ, ತೋಂಟದ ಶ್ರೀಗಳ ವಿರುದ್ಧ ಭ್ರಷ್ಟಾಚಾರದ ಆರೋಪ

ಬೆಳಗಾವಿ : ರಾಜ್ಯದಲ್ಲಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಒಂದು ವೀರಶೈವ ಲಿಂಗಾಯತರು ಒಂದೇ ಎಂಬ ವಾದವನ್ನು ಹಲವರು ಮಂಡಿಸುತ್ತಿದ್ದಾರೆ. ಇನ್ನೂ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನತ್ಯಗೆ ಆಗ್ರಹಿಸಿ ಇದೇ 22 ಬೆಳಗಾವಿಯಲ್ಲಿ ಬೃಹತ್ ಧರಣಿ ನಡೆಸಲು ಸಿದ್ಧತೆ ಆರಂಭವಾಗಿದೆ. ಮತ್ತೊಂದು ಕಡೆ ಲಿಂಗಾಯತ ವೀರಶೈವ ಒಂದೇ ಎಂದು ಸ್ವಾಮಿಜೀಗಳು ಸಭೆ ನಡೆಸಿ ಒಗ್ಗಟ್ಟೂ ಪ್ರದರ್ಶನ ಮಾಡಿದ್ರು. ಈ ಸಭೆಯಲ್ಲಿ ಮಾತೆ ಮಹಾದೇವಿ ಹಾಗೂ ತೋಂಟದಾರ್ಯ ಸ್ವಾಮೀಜಿ ವಿರುದ್ದ ಹಲವು ಗಂಭೀರ ಆರೋಪ ಸಹ ಕೇಳಿ ಬಂದಿದೆ.

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಇದೀಗ ಲಿಂಗಾಯತ ಮುಖಂಡರು ಹಾಗೂ ವೀರಶೈವ ಸ್ವಾಮೀಜಿಗಳು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಮಾತೆ ಮಹಾದೇವಿ ಹಾಗೂ ತೋಟದ ಶ್ರೀಗಳ ವಿರುದ್ಧ ಟೀಕೆಗಳು ಕೇಳಿಬಂದಿವೆ. ಇದೇ 22 ಬೆಳಗಾವಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಆಗ್ರಹಿಸಿ ಬೃಹತ್ ಧರಣಿ ನಡೆಸಲು ಲಿಂಗಾಯತ ಸಮಾಜ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ದತೆಗಳು ಸಹ ನಡೆಯುತ್ತಿವೆ. ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಬಲ ಪ್ರದರ್ಶನ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾರ್ಯತಂತ್ರ ನಡೆಯುತ್ತಿದೆ. ಇನ್ನೂ ಬೆಳಗಾವಿಯಲ್ಲಿ ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್, ‘ ಲಿಂಗಾಯತ ಧರ್ಮ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಹುಟ್ಟಿದೆ. ಅನ್ಯಾಯ, ಅತ್ಯಾಚಾರ ಹಾಗೂ ಮೂಢನಂಬಿಕೆ ವಿರುದ್ಧ ಲಿಂಗಾಯತ ಧರ್ಮವಿದೆ. ಲಿಂಗಾಯತ ಪೂರ್ವ ವಾದ್ರೆ, ವೀರಶೈವ ಪಶ್ಚಿಮವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಪಂಚಾಚಾರ್ಯ ಕೃಪಾ ಪೋಷಿತ ನಾಟ್ಯ ಸಂಘ ‘ ಎಂದು ಕಿಡಿ ಕಾರಿದರು.

ಇನ್ನೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಡಚಿ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಿದ 30ಕ್ಕೂ ಹೆಚ್ಚು ಗುರು ವಿರಕ್ತ  ಸ್ವಾಮಿಗಳು ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗೋಡಚಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ನಂತರ ಸಭೆ ನಡೆಸಿದರು. ಲಿಂಗಾಯತ ಹಾಗೂ ವೀರಶೈವ ಒಂದೇ ಇದನ್ನು ಪ್ರತ್ಯೇಕಿಸಿ ಸಮಾಜದಲ್ಲಿ ಒಡಕು ಉಂಟುಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜದಲ್ಲಿ ಒಡೆಯಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಪ್ರತಿಜ್ಞೆಯನ್ನು ಭೋದಿಸಲಾಯಿತು. ಸಭೆಯಲ್ಲಿ ಮಾತನಾಡಿದ ಕಮತಗಿ ಹುಚ್ಚೇಶ್ವರ ಮಠದ ಸ್ವಾಮಿಗಳು ಮಾತೇ ಮಹಾದೇವಿ ವಿರುದ್ಧ ಆಕ್ರೋಶ ವ್ಯಕ್ತಪಡಿದರು. ಈ ಹಿಂದೆ ಜಗದ್ಗುರು ಒಬ್ಬರು ಮಾತೆ ಮಾಹಾದೇವಿಗೆ ಲೇಡಿ ಒಸಮಾ ಬಿಲ್ ಲ್ಯಾಡನ್ ಅಂತ ಹೇಳಿದ್ರು ಇದೀಗ ಅವರೇ ಪ್ರತ್ಯೇಕ ಧರ್ಮಕ್ಕಾಗಿ ಆಕೆಯ ಸಿರಿ ಹಿಡಿದು ಓಡಾಡುತ್ತಿದ್ದಾರೆ ಎಂದರು. ಇನ್ನೋಮ್ಮೆ ಹಾನಗಲ ಶ್ರೀಗಳ ಬಗ್ಗೆ ಮಾತನಾಡಿದ್ರೆ ಅವರ ಇರುವ ವೇದಿಕೆ ಮೇಲೆ ಹಲ್ಲೆ ನಡೆಸುವುದಾಗಿ ಸ್ವಾಮೀಜಿ ಕಿಡಿಕಾರಿದರು.

ಇದೇ ಸಭೆಯಲ್ಲಿ ಮಾತನಾಡಿದ ಘೋಡಗೇರಿ ವಿರಕ್ತ ಮಠದ ಕಾಶಿನಾಥ ಸ್ವಾಮೀಜಿ ಸಹ ಮಾತೆ ಮಹಾದೇವಿಯ ಹಾಗೂ ತೋಂಟದಾರ್ಯ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು. ತೋಂಟದಾರ್ಯ ಸ್ವಾಮಿಜೀ ಭ್ರಷ್ಟಾಚಾರ ನಡೆಸಿದ್ದಾರೆ. ಶಾಪಗ್ರಸ್ಥ ಮಠಕ್ಕೆ ಭ್ರಷ್ಟ ಸ್ವಾಮಿಜೀ ಅಧಿಕಾರ ವಹಿಸಿಕೊಂಡಿದ್ದು ವಿಪರ್ಯಾಸ ಎಂದರು ಹೇಳಿಕೆ ನೀಡಿದರು.

ಒಟ್ಟಾರೆಯಾಗಿ ಲಿಂಗಾಯತ ಮತ್ತು ವೀರಶೈವ ಜಾತಿಗಳ ನಡುವೆ ಇದೀಗ ಧರ್ಮ ಸಂಘರ್ಷ ಆರಂಭವಾಗಿದೆ. ತಪ್ಪು ದಾರಿಯಲ್ಲಿ ನಡೆಯುವ ಜನರಿಗೆ ತಿದ್ದಿ ತೀಡಿ ಬುದ್ದಿ ಹೇಳಬೇಕಿದ್ದ ಸ್ವಾಮೀಜಿಗಳೆ ಇದೀಗ ಪರಸ್ಪರ ಆರೋಪ ಪ್ರತ್ಯಾರೋದಲ್ಲಿ ತೊಡಗಿದ್ದಾರೆ. ಇದು ಮುಂದೆ ಯಾವ ಗಂಭೀರ ಸ್ವರೂಪ ಪಡೆಯಲಿದೆ ಎಂಬುದು ಕಾದು ನೋಡಬೇಕು.

7 thoughts on “ಬೆಳಗಾವಿ : ಮಠಾಧೀಶರ ವಾಗ್ದಾಳಿ, ತೋಂಟದ ಶ್ರೀಗಳ ವಿರುದ್ಧ ಭ್ರಷ್ಟಾಚಾರದ ಆರೋಪ

 • October 18, 2017 at 12:43 PM
  Permalink

  Hi, i believe that i noticed you visited my web site so i got here to go back the prefer?.I am trying to find things to improve my web site!I assume its good enough to make use of some of your ideas!!|

 • October 18, 2017 at 2:29 PM
  Permalink

  Hello my loved one! I want to say that this post is amazing, nice written and include almost all vital infos. I’d like to see extra posts like this .|

 • October 18, 2017 at 4:00 PM
  Permalink

  Howdy! This blog post could not be written much better! Going through this article reminds me of my previous roommate! He constantly kept preaching about this. I’ll send this article to him. Fairly certain he’ll have a very good read. Thanks for sharing!|

 • October 18, 2017 at 4:15 PM
  Permalink

  Hey! This is my first visit to your blog! We are a team of volunteers and starting a new initiative in a community in the same niche. Your blog provided us valuable information to work on. You have done a outstanding job!|

 • October 20, 2017 at 6:13 PM
  Permalink

  Nice blog here! Also your website loads up very fast! What host are you using? Can I get your affiliate link to your host? I wish my website loaded up as quickly as yours lol|

 • October 20, 2017 at 8:31 PM
  Permalink

  Wonderful work! This is the type of info that are supposed
  to be shared across the internet. Disgrace on Google for now not positioning this put up
  higher! Come on over and consult with my site . Thank you =)

 • October 21, 2017 at 3:45 AM
  Permalink

  Hey I know this is off topic but I was wondering if you knew of
  any widgets I could add to my blog that automatically tweet my newest twitter updates.
  I’ve been looking for a plug-in like this for quite some
  time and was hoping maybe you would have some experience with something like this.
  Please let me know if you run into anything. I truly enjoy reading your blog and I
  look forward to your new updates.

Comments are closed.