ಲಂಡನ್ : ವೃತ್ತಿ ಜೀವನದ ಕೊನೆಯ ರೇಸ್ ಓಡಲಿರುವ ಉಸೇನ್ ಬೋಲ್ಟ್

ವಿಶ್ವದಾಖಲೆ ವೀರ ಉಸೇನ್ ಬೋಲ್ಟ್ ಇಂದು ತಮ್ಮ ವೃತ್ತಜೀವನದ ಕೊನೆ ರೇಸ್ ಓಡಲಿದ್ದಾರೆ. ಇಂದು ರಾತ್ರಿ ಲಂಡನ್‌ನಲ್ಲಿ ನಡೆಯಲಿರುವ ಐಎಎಎಫ್‌ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ನಲ್ಲಿ ತಮ್ಮ ವೃತ್ತಿ ಜೀವನದ ಕಟ್ಟಕಡೆಯ ಓಟವನ್ನು ಓಡಲಿದ್ದಾರೆ.

2009ರಲ್ಲಿ ಬರ್ಲಿನ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 100 ಮತ್ತು 200 ಮೀಟರ್‌ ಓಟಗಳನ್ನು ಕ್ರಮವಾಗಿ 9.58 ಸೆ. ಹಾಗೂ 19.19 ಸೆ.ಗಳಲ್ಲಿ ಪೂರೈಸಿದ ಬೋಲ್ಟ್‌ ನೂತನ ವಿಶ್ವ ದಾಖಲೆ ಬರೆದಿದ್ದರು.

Related image Related image

30 ವರ್ಷದ ಜಮೈಕಾದ ಓಟಗಾರ ಉಸೇನ್‌ ಬೋಲ್ಟ್‌, 2008ರ ಬೀಜಿಂಗ್‌ ಒಲಿಂಪಿಕ್ಸ್‌, 2012 ರ ಲಂಡನ್ ಓಲಂಪಿಕ್ಸ್ ಹಾಗೂ 2016ರ ರಿಯೋ ಓಲಂಪಿಕ್ಸ್ ಗಳಲ್ಲಿ 8 ಸ್ವರ್ಣಗಳನ್ನು ಬಾಚಿಕೊಂಡರು. 11 ಬಾರಿ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟ ಕೂಡ ಬೋಲ್ಟ್‌ ಅವರ ಮುಡಿಯೇರಿದೆ.

” ಕೊನೆಯ ರೇಸ್ ನಲ್ಲಿ ಗೆಲ್ಲುವುದೊಂದೇ ನನ್ನ ಪ್ರಧಾನ ಗುರಿ. ಜಯದೊಂದಿಗೆ ನಿವೃತ್ತಿ ಹೊಂದುವುದನ್ನು ಎದುರು ನೋಡುತ್ತಿದ್ದೇನೆ,” ಎಂದು ಬೋಲ್ಟ್‌ ಹೇಳಿದ್ಧಾರೆ.

One thought on “ಲಂಡನ್ : ವೃತ್ತಿ ಜೀವನದ ಕೊನೆಯ ರೇಸ್ ಓಡಲಿರುವ ಉಸೇನ್ ಬೋಲ್ಟ್

 • October 24, 2017 at 7:49 PM
  Permalink

  Normally I don’t learn post on blogs, however I would like
  to say that this write-up very compelled me to try and do
  so! Your writing style has been amazed me. Thank you,
  very nice post.

Comments are closed.

Social Media Auto Publish Powered By : XYZScripts.com