ಪೂರ್ಣಗೊಂಡ ಐಟಿ ದಾಳಿ : ಎಲ್ಲದಕ್ಕೂ ದಾಖಲೆಗಳ ಮೂಲಕವೇ ಉತ್ತರ ಕೊಡ್ತೇನೆ ಎಂದ ಡಿಕೆಶಿ

ಬೆಂಗಳೂರು : ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳ ದಾಳಿ ಕೊನೆಗೊಂಡಿದೆ. ಐಟಿ ದಾಳಿ ಬಳಿಕ ಮೊದಲ ಬಾರಿಗೆ ಮನೆಯಿಂದ ಹೊರಬಂದಿರುವ ಡಿ.ಕೆ.ಶಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ನಾನು  ಯಾರಿಗೂ ಕಿವಿಯಲ್ಲಿ ಹೂವು ಇಟ್ಟು ಬಂದಿಲ್ಲ. ನಾನು ಹಳ್ಳಿಯಿಂದ ಬಂದವನು. ಯಾರನ್ನೂ ಮೋಸ ಮಾಡಿ ರಾಜಕಾರಣ ಮಾಡಿಲ್ಲ. ಶೀಘ್ರದಲ್ಲೇ ನಾನು ಮತ್ತೆ ಮಾದ್ಯಮಗಳ ಮುಂದೆ ಬರ್ತೀನೆ. ನೀವು ಏನೆಲ್ಲ ತೋರಿಸಿದ್ದೀರಿ ಅದೆಲ್ಲಕ್ಕೂ ಉತ್ತರ ಕೊಡ್ತೇನೆ. ನಾನು ಮಾತನಾಡುವುದಿಲ್ಲ, ಆದ್ರೆ ದಾಖಲೆಗಳನ್ನು ಹಿಡಿದು ಬರ್ತೇನೆ.  ದಾಖಲೆಗಳ ಮೂಲಕವೇ ನಾನು ಎಲ್ಲರಿಗೂ ಉತ್ತರ ಕೊಡ್ತೇನೆ ಎಂದಿದ್ದಾರೆ. ಜೊತೆಗೆ  ನಾನು ಯಾವುದೇ ರೀತಿ ಕಾನೂನು ಉಲ್ಲಂಘನೆ ಮಾಡಿಲ್ಲ. ಈಗ ನಾನು ನಂಬಿರುವ ದೇವರ ದರ್ಶನಕ್ಕೆ ತೆರಳ್ತಿದ್ದೀನಿ. ನಂತರ ನನ್ನ ಶಾಸಕರನ್ನು ಭೇಟಿ ಮಾಡ್ತೀನಿ ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com