ಟಿವಿ ರಿಯಾಲಿಟಿ ಶೋ ಬಾಲಕನ ಸಾವಿಗೆ ಕಾರಣವಾಗಿದ್ದಾದರೂ ಹೇಗೆ..?

ತೆಲಂಗಾಣಾದಲ್ಲಿ 11 ವರ್ಷದ ಬಾಲಕನೊಬ್ಬ ರಿಯಾಲಿಟಿ ಶೋ ನ ಸ್ಟಂಟ್ ಅನ್ನು ಮನೆಯಲ್ಲಿ ಕಾಪಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. 6 ನೇ ತರಗತಿಯಲ್ಲಿ ಓದುತ್ತಿದ್ದ ರಾಪಲ್ಲೆ ಕಾಲಿ ಎಂಬ ಹುಡುಗನೊಬ್ಬ ಬೆಂಕಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಮೂರು ದಿನಗಳ ಹಿಂದೆ ಈತ ಟಿವಿಯಲ್ಲಿ ಒಂದು ರಿಯಾಲಿಟಿ ಶೋ ನೋಡಿದ್ದಾನೆ. ಅಲ್ಲಿ ಸಾಹಸಮಯ ಆಟಗಳನ್ನು ಪ್ರದರ್ಶಿಸುವ ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಬೆಂಕಿಯನ್ನು ಹಿಡಿದುಕೊಂಡು, ಬಾಯಿಂದ ಸೀಮೆಎಣ್ಣೆಯನ್ನು ಉಗುಳಿ, ಫೈರ್ ಸ್ಟಂಟ್ ಪ್ರದರ್ಶನ ಮಾಡಿದ್ದಾನೆ.

Related image                                               ಇದನ್ನು ನೋಡಿದ ಬಾಲಕ ತಾನೂ ಬಾಯಲ್ಲಿ ಸೀಮೆಎಣ್ಣೆಯನ್ನು ಸುರಿದುಕೊಂಡು, ಕೈಯಲ್ಲಿ ಬೆಂಕಿ ಹಿಡಿದುಕೊಂಡು ಫೈರ್ ಬಾಲ್ ಸ್ಟಂಟ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಇದನ್ನು ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಈತನ ಮೈಯನ್ನೆಲ್ಲ ಆವರಿಸಿಕೊಂಡು ಮೈತುಂಬ ಸುಟ್ಟ ಗಾಯಗಳಾಗಿವೆ. ಬಳಿಕ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಮದಕ್ಕೆ ಈತನನ್ನು ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಾಗ ಟಿವಿ ಶೋಗಳ ಸ್ಟಂಟ್ ಪ್ರದರ್ಶನ ಮಾಡುತ್ತಿದ್ದನೆಂದು ತಿಳಿದುಬಂದಿದೆ. 4 ತಿಂಗಳ ಹಿಂದೆ ಕರೀಮ್ ನಗರದಲ್ಲಿ ಇದೇ ಸಾಹಸಕ್ಕೆ ಕೈ ಹಾಕಿ ಮತ್ತೊಬ್ಬ ಬಾಲಕ ಪ್ರಾಣ ಕಳೆದುಕೊಂಡಿದ್ದ. ಕೇವಲ ಜನರಿಗೆ ಮನರಂಜನೆ ಒದಗಿಸಲು ಹುಟ್ಟಿಕೊಂಡ ರಿಯಾಲಿಟಿ ಶೋಗಳು ಪ್ರಾಣಕ್ಕೆ ಸಂಚಕಾರ ತಂದಿರುವುದು ದುರಂತವೇ ಸರಿ..

Comments are closed.

Social Media Auto Publish Powered By : XYZScripts.com