ಮದುಮಗಳನ್ನು ಕಿಡ್ನ್ಯಾಪ್ ಮಾಡಲು ಹೋಗಿ ಧರ್ಮದೇಟು ತಿಂದ ‘ಕಿರಾತಕ’ರು

ಬೆಳಗಾವಿ : ಗೋಕಾಕ್ ಗ್ರಾಮದ ಅರಳಿಮಟ್ಟಿ ಗ್ರಾಮಸ್ಥರು ರಾಯಚೂರು ಮೂಲದ 4 ಜನ ಕಿಡ್ನಾಪರ್ ಗಳನ್ನ ಅಟ್ಟಾಡಿಸಿ ಥಳಿಸಿದ್ದಾರೆ. ಗೋಕಾಕ ತಾಲೂಕಿನ ಅರಳಿಮಟ್ಟಿ ಗ್ರಾಮದ ಬಳಿ ನಿನ್ನೆ  ಘಟನೆ ನಡೆದಿದೆ. ರಾಯಚೂರು ಮೂಲದ ನಾಲ್ವರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ ಯುವಕರ ಮೇಲೆ ದಾಳಿ ಮಾಡಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು ಗೋಕಾಕ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಬಂದಿದ್ದ ಕಾರನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಯುವಕರನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮಹೇಶ ಎನ್ನುವ ಯುವಕ ಗುಲಗುಂಜಿಕೊಪ್ಪ ಗ್ರಾಮದಲ್ಲಿ ಒರ್ವ ಯುವತಿಯನ್ನ ಪ್ರೀತಿಸುತ್ತಿದ್ದ. ಇನ್ನೆರಡು ದಿನದಲ್ಲಿಯೇ ಯುವತಿ ಮದುವೆ ಇತ್ತು. ಹಾಗಾಗಿ ಯುವತಿಯನ್ನ ಅಪಹರಿಸಿಕೊಂಡು ಹೋಗಲು ಸ್ನೇಹಿತರಾದ ಅರುಣಕುಮಾರ,ವಿಜಯ್ ಹಾಗೂ ರಮೇಶ ಜೊತೆ ಬಂದಿದ್ದ.

ಈ ವಿಚಾರ ಮನೆಯವರಿಗೆ ಗೊತ್ತಾಗಿ ಹಲ್ಲೆ ನಡೆಸಲು ಮುಂದಾದ್ದಾಗ ತಪ್ಪಿಸಿಕೊಂಡು ಕಾರಿನಲ್ಲಿ ಹೊರಟ್ಟಿದ್ದರು. ಕಾರು ತೆಗೆದುಕೊಂಡು ಹೋಡಿ ಹೋಗುವುದನ್ನ ಗಮನಿಸಿದ ಪಕ್ಕದ ಅವರಾದಿ, ಮಿರ್ಜಿ ಗ್ರಾಮಸ್ಥರು ಇವರು ಮಕ್ಕಳ‌ ಕಳ್ಳರೆಂದಿ ಭಾವಿಸಿ ಇವರ ಮೇಲೆ ಕಲ್ಲಿನಿಂದ ದಾಳಿ ಮಾಡಿದ್ದಾರೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4 thoughts on “ಮದುಮಗಳನ್ನು ಕಿಡ್ನ್ಯಾಪ್ ಮಾಡಲು ಹೋಗಿ ಧರ್ಮದೇಟು ತಿಂದ ‘ಕಿರಾತಕ’ರು

 • October 18, 2017 at 3:14 PM
  Permalink

  I seriously love your website.. Excellent colors & theme. Did you make this site yourself? Please reply back as I’m wanting to create my very own site and would like to learn where you got this from or just what the theme is named. Kudos!|

 • October 21, 2017 at 2:02 AM
  Permalink

  For most up-to-date news you have to visit world wide web and on world-wide-web I found this website as a most
  excellent web page for most up-to-date updates.

 • October 24, 2017 at 12:41 PM
  Permalink

  You really make it appear so easy together with your presentation however
  I find this matter to be actually one thing which I believe I would
  by no means understand. It kind of feels too complex and
  extremely large for me. I’m taking a look ahead to
  your next submit, I will attempt to get the hang of it!

Comments are closed.