ಸರ್ದಾರ್ ಗೆ ಖೇಲ್ ರತ್ನ, ಸುನಿಲ್, ಹರ್ಮನ್ ಪ್ರೀತ್ ಸೇರಿದಂತೆ 17 ಜನರಿಗೆ ಅರ್ಜುನ ಪ್ರಶಸ್ತಿ

ಕರ್ನಾಟಕದ ಖ್ಯಾತ ಹಾಕಿ ಪಟು ಎಸ್​.ವಿ ಸುನಿಲ್​, ಟೆಸ್ಟ್​​ನ ಕ್ಲಾಸಿಕ್​ ಬ್ಯಾಟ್ಸ್​​ಮನ್​ ಚೇತೇಶ್ವರ್​ ಪೂಜಾರ ಸೇರಿದಂತೆ 17 ಜನರಿಗೆ ಅರ್ಜುನ್​ ಪ್ರಶಸ್ತಿ ಘೋಷಿಸಲಾಗಿದೆ.. ಬುಧವಾರ ಕೇಂದ್ರ ಸರ್ಕಾರ ಪ್ರತಿಷ್ಠಿತ ಪುರಸ್ಕಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎರಡು ಬಾರಿ ಪ್ಯಾರಾಲಿಂಪಿಕ್ಸ್​​ನಲ್ಲಿ ಬಂಗಾರದ ಸಾಧನೆಯನ್ನು ಮಾಡಿರುವ ದೇವೇಂದ್ರ ಝಾಜಾರಿಯಾ, ಹಾಕಿ ತಂಡದ ಮಾಜಿ ನಾಯಕ, ಅನುಭವಿ ಆಟಗಾರ ಸರ್ದಾರ್​ ಸಿಂಗ್​ ಅವರಿಗೆ ಕ್ರೀಡಾ ಕ್ಷೇತ್ರದ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ಖೇಲ್​ ರತ್ನ ಪ್ರಶಸ್ತಿ ಗೌರವಕ್ಕೆ ಭಾಜನರಾಗಲಿದ್ದಾರೆ..

ಅರ್ಜುನ್​ ಪ್ರಶಸ್ತಿ ವಿಜೇತರು

ಅರೋಕಿನ್​ (ಅಥ್ಲೇಟಿಕ್ಸ್​​), ಪ್ರಶಾಂತಿ ಸಿಂಗ್​ (ಬಾಸ್ಕೆಟ್​ಬಾಲ್​), ಎಲ್​ ದೇವೇಂದ್ರೊ ಸಿಂಗ್​ (ಬಾಕ್ಸಿಂಗ್​), ಚೇತೇಶ್ವರ್ ಪೂಜಾರ (ಕ್ರಿಕೆಟ್​), ಹರ್ಮನ್​ ಪ್ರೀತ್​ ಕೌರ್​ (ಕ್ರಿಕೆಟ್​), ಎಸ್​.ವಿ ಸುನಿಲ್​ (ಹಾಕಿ), ಜಸ್ವೀರ್​ ಸಿಂಗ್​ (ಕಬಡ್ಡಿ), ಪಿ.ಎನ್​ ಪ್ರಕಾಶ್​ (ಶೂಟಿಂಗ್​), ಎ.ಅಮಲರಾಜ್​ (ಟೇಬಲ್​ ಟೆನಿಸ್​), ಸಾಕೇತ್​ ಮೈನೆನಿ (ಟೆನಿಸ್​), ಸತ್ಯವ್ರತ್​ (ಕುಸ್ತಿ), ಮರಿಯಪ್ಪನ್​ ತಂಗವೇಲು (ಪ್ಯಾರಾಲಿಂಪಿಯನ್​), ವರುಣ್​ ಭಾಟಿ (ಪ್ಯಾರಾಲಿಂಪಿಯನ್​).

Comments are closed.

Social Media Auto Publish Powered By : XYZScripts.com