FOOTBALL : ಬಾರ್ಸಿಲೋನಾ ಕ್ಲಬ್ ತೊರೆಯುವುದಾಗಿ ಹೇಳಿದ ನೆಯ್ಮರ್ ಜೂನಿಯರ್

ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ ನೆಯ್ಮಾರ್ ಜೂನಿಯರ್ ಬಾರ್ಸಿಲೋನಾ ಕ್ಲಬ್ ಗೆ ಗುಡ್ ಬೈ ಹೇಳಲಿದ್ದಾರೆ. ಬಾರ್ಸಿಲೋನಾ ತಂಡದ ಸದಸ್ಯರಿಗೆ ನೆಯ್ಮಾರ್ ‘ ನಾನು ತಂಡವನ್ನು ತೊರೆಯುತ್ತಿದ್ದೇನೆ ‘ ಎಂದು ಹೇಳಿದ್ದಾರೆ. ಬಾರ್ಸಿಲೊನಾ ಕಲ್ಬ್ ತೊರೆದ ನಂತರ , ಪ್ಯಾರಿಸ್ ಸೇಂಟ್ ಜರ್ಮನ್ ತಂಡವನ್ನು ಕೂಡಿಕೊಳ್ಳಲು ಬಯಸಿದ್ದಾರೆ. ಬಾರ್ಸಿಲೋನಾ ತಂಡದ ಫೇಮಸ್ ಟ್ರೈಯೋ ಮೆಸ್ಸಿ-ನೆಯ್ಮರ್-ಸ್ವಾರೆಜ್ ರ ಜೊತೆಯಾಗಿ ಆಡುವುದನ್ನು ಫುಟ್ಬಾಲ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳುವುದಂತೂ ಖಚಿತ. PSG ತಂಡ ನೆಯ್ಮರ್ ರೊಂದಿಗೆ 222 ಮಿಲಿಯನ್ ಯುರೋ ಗಳನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದೆ.

Image result for neymar barcelona leaving goodbye  Image result for neymar messi suarez

ಕಳೆದ ವರ್ಷ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್, ಪಾಲ್ ಪೋಗ್ಬಾ ರೊಂದಿಗೆ 105.2 ಮಿಲಿಯನ್ ಯುರೋ ಗಳಿಗೆ ಒಪ್ಪಂದ ಮಾಡಿಕೊಂಡಿದ್ದು ಇಲ್ಲಿಯವರೆಗಿನ ಹೆಚ್ಚು ಮೊತ್ತದ ದಾಖಲೆಯಾಗಿತ್ತು. ಆದರೆ ಈಗ PSG ಹಾಗೂ ನೆಯ್ಮರ್ ನಡುವಿನ ಒಪ್ಪಂದ ಹೊಸ ದಾಖಲೆ ಸೃಷ್ಟಿಸಲಿದೆ.

ಮೆಸ್ಸಿ ಹಾಗೂ ನೆಯ್ಮರ್ ಸಹ ಆಟಗಾರರಷ್ಟೇ ಅಲ್ಲದೆ, ಒಳ್ಳೆಯ ಸ್ನೇಹಿತರೂ ಹೌದು. ತಂಡಕ್ಕೆ ವಿದಾಯ ಹೇಳುತ್ತಿರುವ ತಮ್ಮ ಸ್ನೇಹಿತನಿಗಾಗಿ ಲಿಯೋನೆಲ್ ಮೆಸ್ಸಿ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Comments are closed.

Social Media Auto Publish Powered By : XYZScripts.com