ವಿಚಿತ್ರವಾದರೂ ಸತ್ಯ : ನವಜಾತ ಶಿಶುವಿನ ಗರ್ಭದಲ್ಲಿ ಮತ್ತೊಂದು ಮಗು!?

ದೆಹಲಿ : ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತಹ ಸಂಗತಿಯೊಂದು ಬೆಳಕಿಗೆ ಬಂದಿದೆ. ಗಂಡು ಮಗುವೊಂದು ತನ್ನ ಸಹೋದರನ ಭ್ರೂಣವನ್ನು ತನ್ನ ಹೊಟ್ಟೆಯಲ್ಲೇ ಹೊತ್ತು ಜನಿಸಿದ್ದು, ವೈದ್ಯರನ್ನು ಆಶ್ಚರ್ಯಕ್ಕೀಡುಮಾಡಿದೆ. ನವಜಾತ ಶಿಶುವೊಂದು ಇಂದು ಥಾಣೆಯ ಆಸ್ಪತ್ರೆಯೊಂದರಲ್ಲಿ ಜನಿಸಿದೆ., ಆ ಮಗುವಿನ ಭ್ರೂಣದೊಳಗೆ ಮತ್ತೊಂದು ಗಂಡು ಮಗುವಿದ್ದು, ಆ ಮಗುವಿಗೆ ಕೈ ಕಾಲು, ಮೆದುಳು ಎಲ್ಲವೂ ಇತ್ತೆಂದು ವೈದ್ಯರು ಹೇಳಿದ್ದಾರೆ. ಇದುವರೆಗೂ ಪ್ರಪಂಚದಲ್ಲಿ ಪತ್ತೆಯಾಗಿರು 200 ಭ್ರೂಣದೊಳಗೆ ಇದೂ ಒಂದು ಎನ್ನಲಾಗಿದೆ.

ಮಗುವಿನ ಹೊಟ್ಟೆಯೊಳಗಿದ್ದ 7 ಸೆ.ಮೀ ಉದ್ದದ ಭ್ರೂಣವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಮುಂಬ್ರಾದ ಬಿಲಾಲ್ ಆಸ್ಪತ್ರೆಯ ರೆಡಿಯಾಲಜಿಸ್ಟ್‌ ಡಾ. ಭಾವನಾ  ಥೋರಟ್‌ ಜುಲೈ 19 ರಂದು ಮಗುವಿನ ತಾಯಿಯ ಸ್ಕ್ಯಾನಿಂಗ್‌ ಮಾಡಿದ್ದಾರೆ. ಸ್ಕ್ಯಾನಿಂಗ್‌ ಮಾಡುವ ವೇಳೆ ಗರ್ಭಿಣಿಯ ಹೊಟ್ಟೆಯೊಳಗಿರುವ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಇರುವುದನ್ನು ಪತ್ತೆ ಹಚ್ಚಿದ್ದರು.

ಸದ್ಯ ಮಗುವಿನ ಗರ್ಭದಲ್ಲಿದ್ದ ಮತ್ತೊಂದು ಮಗುವನ್ನು ಹೊರತೆಗೆಯಲಾಗಿದ್ದು, ಈಗ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ.

Comments are closed.