ಆಡ್ತಾ ಆಡ್ತಾನೇ ಸಾಯೋ ಬ್ಲೂವೇಲ್ ಆಟಕ್ಕೆ ಬಾಲಕ ಬಲಿ..

ಮುಂಬೈ : ಮನುಷ್ಯ ಆಟ ಆಡೋದು ಮನರಂಜನೆಗಾಗಿ.. ಖುಶಿಗಾಗಿ.. ಒತ್ತಡ ನಿವಾರಣೆಗಾಗಿ.. ಆದ್ರೆ ಇಲ್ಲೊಂದು ವಿಚಿತ್ರ ಆಟದ ಹುಚ್ಚು ಶುರುವಾಗಿದೆ.. ಇದು ಆಡುವವರ ಪ್ರಾಣವನ್ನೇ ತೆಗೆಯುತ್ತೆ.. ಆ ಆಟದ ಹೆಸರು ಬ್ಲೂವೇಲ್ ಅಂತ.. ರಷ್ಯಾ ಮೂಲದ ಈ ಬ್ಲೂ ವೇಲ್‌ ಆಟಕ್ಕೆ ಮುಂಬೈನ 14 ವರ್ಷದ ಬಾಲಕ ಬಲಿಯಾಗಿದ್ದಾನೆ.. ಈ ಹುಡುಗ ಮಾಡಿದ್ಧೇನಂದ್ರೆ, ಏಳಂತಸ್ತಿನ ಕಟ್ಟಡದ ಮೇಲೆ ಕುಳಿತು ತನ್ನ ಕಾಲಿನ ಫೋಟೊವನ್ನು ತೆಗೆದು ಇನ್ನು ಮುಂದೆ ನನ್ನ ಇದೊಂದೇ ಫೋಟೊ ನೋಡಬೇಕಾಗಿರುವುದು ಎಂದು ಶೀರ್ಷಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಸಾವನ್ನಪ್ಪಿರುವ ಬಾಲಕ ಮನ್‌ಪ್ರೀತ್‌ ಸಹಾನ್ಸ್‌, ಶನಿವಾರ ತನ್ನ ಸ್ನೇಹಿತರ ಬಳಿ ನಾನು ಬ್ಲೂ ವೇಲ್ ಗೇಮ್ ಆಡಬೇಕು. ಸೋಮವಾರ ಶಾಲೆಗೆ ಬರುವುದಿಲ್ಲ ಎಂದಿದ್ದ. ಅಲ್ಲದೆ ಕಳೆದ ಒಂದು ವಾರದಿಂದ ಆತನ ವರ್ತನೆ ವಿಚಿತ್ರವಾಗಿರುವುದು ಪೋಷಕರ ಗಮನಕ್ಕೂ ಬಂದಿತ್ತು. ಆದರೆ ಆತ ಬ್ಲೂವೇಲ್‌ ಆಟದ ಚಟಕ್ಕೆ ಬಿದ್ದಿದುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಎರಡು ದಿನಗಳ ಹಿಂದೆ ಮನ್‌ಪ್ರೀತ್‌ ಇಂಟರ್‌ನೆಟ್‌ನಲ್ಲಿ ಮಹಡಿಯಿಂದ ಜಿಗಿಯುವ ಬಗೆ ಹೇಗೆ ಎಂಬುದನ್ನು ಹುಡುಕಿದ್ದ ಎಂದು ಪೊಲೀಸರು ಹೇಳಿದ್ದಾರೆ.  ಇನ್ನು ಘಟನೆ ಕುರಿತು ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸಿಎಂ ಫಡ್ನವೀಸ್‌, ಬ್ಲೂವೇಲ್‌ ಆಟ ಅಪಾಯಕಾರಿಯಾಗಿದ್ದು, ಎಲ್ಲರೂ ಇದರಿಂದ ಭೀತಿಗೊಳಗಾಗಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ.

ಏನಿದು ಬ್ಲೂವೇಲ್ ಗೇಮ್‌

ಮೂಲತಃ ರಷ್ಯಾದಲ್ಲಿ ಹುಟ್ಟಿಕೊಂಡಿರುವ ಬ್ಲೂ ವೇಲ್‌ ಸೂಸೈಡ್‌ ಚಾಲೆಂಗ್‌ ಗೇಮ್‌ ಆನ್‌ಲೈನ್‌ ಆಟವಾಗಿದ್ದು, ರಷ್ಯಾ ಸೇರಿದಂತೆ ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸುಮಾರು 180ಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಆಟದಲ್ಲಿ ಆಟಗಾರನಿಗೆ 50 ಸರಣಿಯ ಟಾಸ್ಕ್‌ ನೀಡಲಾಗುತ್ತದೆ. ನಂತರ 50ನೇ ಟಾಸ್ಕ್‌ಗೆ ಬಂದಾಗ ಮಹಡಿಯಿಂದ ಜಿಗಿಯುವಂತೆ ಆಟದಲ್ಲಿ ಸೂಚನೆ ನೀಡಲಾಗುತ್ತದೆ. ಅಲ್ಲದೆ ಸಾಯುವುದಕ್ಕೂ ಮುನ್ನ ತಾವು ಆಟವನ್ನು ಕೊನೆಗೊಳಿಸಿದ್ದೇವೆ ಎನ್ನಲು ತಮ್ಮ ಫೋಟೊವನ್ನು ತೆಗೆದು ಸಾಕ್ಷಿ ನೀಡುವಂತೆ ಕೇಳುತ್ತದೆ. ಅಲ್ಲದೆ ಈ ಆಟದಲ್ಲಿ ಹಾರರ್‌ ಸಿನಿಮಾಗಳನ್ನು ನೋಡುವ ಟಾಸ್ಕ್‌, ಆಟದಲ್ಲಿ ಸೂಚಿಸುವಂತೆ ಗಂಟೆ ಗಟ್ಟಲೆ ನಡೆಯುತ್ತಲೇ ಇರುವುದು.  ತಮಗೆ ತಾವೇ ಹಾನಿ ಮಾಡಿಕೊಳ್ಳುವುದು, ಈ ರೀತಿಯ ಸೂಚನೆಗಳನ್ನು ನೀಡುತ್ತದೆ. ಏನೂ ಅರಿವಿಲ್ಲದ ಮಕ್ಕಳು ಈ ಆಟದ ಚಟಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಬ್ಯೂ ವೇಲ್’ ಹೆಸರಿನ ನಿಗೂಢ ಗ್ಯಾಂಗ್!!
ರಷ್ಯಾದಲ್ಲಿ ವಿಕೆ ಹೆಸರಿನ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಲ್ಲಿದ್ದು, ಇದರಲ್ಲಿ ‘ಬ್ಯೂ ವೇಲ್’ ಹೆಸರಿನ ನಿಗೂಢ ಗುಂಪೊಂದು ಕಾರ್ಯನಿರ್ವಹಿಸುತ್ತಿದೆ. ತನ್ನನ್ನು ತಾನು ‘ಆನ್‌ಲೈನ್ ಗೇಮ್’ ಎಂದು ಕರೆದುಕೊಂಡಿರುವ ‘ಬ್ಲೂ ವೇಲ್’ಗೆ 12 ರಿಂದ 16ರ ನಡುವಿನ ಯುವಕ ಯುವತಿಯರು ಸದಸ್ಯರಾಗುತ್ತಾರೆ. ನಂತರ ಅವರಿಗೆ 50 ದಿನಗಳ ಆಟಕ್ಕೆ ಅಹ್ವಾನ ನೀಡಲಾಗುತ್ತದೆ.!!

ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ!!
ಈ ಆಟದ ಪ್ರಕಾರ ಮೇಲ್ವಿಚಾರರಕರು ಭಾಗವಹಿಸುವ ಅಭ್ಯರ್ಥಿಗೆ 50 ದಿನ 50 ಸವಾಲುಗಳನ್ನು ನೀಡುತ್ತಾರೆ. ಅಭ್ಯರ್ಥಿಯು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಜಯಗಳಿಸಬೇಕು. ಒಮ್ಮೆ ಆಟಕ್ಕೆ ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗುತ್ತದೆ.

ಹೇಗಿರುತ್ತದೆ ಟಾಸ್ಕ್‌ಗಳು?
ಬ್ಲೂವೇಲ್ ಗೇಮ್ ಆಟಗಾರನಿಗೆ ಹಾರರ್ ಸಿನಿಮಾ ನೋಡುವುದು, ರಾತ್ರಿ ವೇಳೆಯಲ್ಲಿ ಎದ್ದು ವಾಕ್ ಮಾಡುವುದು, ಹಾಗೂ ತನಗೆ ತಾನೇ ನೋವುಂಟು ಮಾಡಿಕೊಳ್ಳುವುದು ಸೇರಿ ಹಲವು ವಿಕೃತ ಗೇಮ್‌ಗಳಿರುತ್ತವೆ. ಈ ಗೇಮ್‌ಗೆ ಜಗತ್ತಿನಾದ್ಯಂತ ಹಲವು ವಯಸ್ಕರು ಬಲಿಯಾಗುತ್ತಿದ್ದಾರೆ!! ಈವರೆಗೆ 130 ಯುವಕ ಯುವತಿಯರು ಸಾವನ್ನಪ್ಪಿದ್ದಾರೆ ಎಂಬುದು ಅವರ ಸಾಮಾಜಿಕ ಜಾಲತಾಣದ ಕೊನೆಯ ಸ್ಟೇಟಸ್‌ಗಳು ಹೇಳುತ್ತಿವೆ.!!
ಮೊದಲ 49 ದಿನಗಳ ಅಂತರದಲ್ಲಿ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುವಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಅಷ್ಟೊತ್ತಿಗಾಗಲೇ ಗುಂಪಿನ ನಿರ್ವಾಹಕರು ಆಟಕ್ಕೆ ಒಪ್ಪಿದ ಸದಸ್ಯರ ಮೇಲೆ ಮಾನಸಿಕ ಹಿಡಿತ ಸಾಧಿಸಿ,

 

Comments are closed.