ಆಳ್ವಾಸ್‌ ಕಾವ್ಯಾ ನಿಗೂಢ ಸಾವು : ಬೀದಿಗಿಳಿದ ಪೋಷಕರು, ತನಿಖೆ ನಡೆಸಿದ ಉಗ್ರಪ್ಪ

ಮೂಡಬಿದ್ರೆ : ಆಳ್ವಾಸ್  ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವು ಪ್ರಕರಣ ಸಂಬಂಧ ಕರವೆ ಕಾರ್ಯಕರ್ತರು ಉಡುಪಿ ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಕಾವ್ಯ ಪೋಷಕರು ಭಾಗಿಯಾಗಿದ್ದು, ಆತ್ಮಹತ್ಯೆ ಎಂದು ಆರೋಪಿಸಿದ ಪ್ರವೀಣ್ ಪೂಜಾರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೆನೆ ಎಂದು ಚಪ್ಪಲಿ ತೋರಿಸಿ ಕಾವ್ಯ ತಾಯಿ ದುಃಖ ತೋರ್ಪಡಿಸಿದ್ದಾರೆ. ಕಾವ್ಯಳನ್ನು ಪ್ರವೀಣ್‌ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದು, ನ್ಯಾಯ ಸಿಗುವವರೆಗೂ ನಾವು ಸಮ್ಮನಿರಲ್ಲ ,ಅವರೇ ಕರೆದುಕೊಂಡು ಹೋಗಿ ಅವರೇ ಕೊಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಆರೋಪ ಸಾಬೀತಾದರೆ ಮೋಹನ್‌ ಆಳ್ವ ಅವರಿಗೆ ಗಲ್ಲು ಶಿಕ್ಷೆ ನೀಡುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದು, ಎಲ್ಲಾ ಸಿಸಿಟಿವಿ ಫೂಟೇಜ್‌ ನೀಡುವಂತೆ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಆಳ್ವಾಸ್ ವಿದ್ಯಾಸಂಸ್ಥೆಗೆ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಭೇಟಿ ನೀಡಿದೆ. ವಿಧಾನಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ನೇತ್ರತ್ವದ ತಜ್ಞರ ಸಮಿತಿ ಭೇಟಿ ನೀಡಿದ್ದಾರೆ. ಒಂದು ಗಂಟೆಯಿಂದ ಶಾಲಾ ಕೊಠಡಿಯ ಬಾಗಿಲು ಹಾಕಿ ವಿದ್ಯಾರ್ಥಿಗಳೂಂದಿಗೆ ಉಗ್ರಪ್ಪ ಮಾತನಾಡುತ್ತಿದ್ದಾರೆ. ಇದೇ ವೇಳೆ ತನಿಖಾ ತಂಡ ಸಹ ಕಾಲೇಜಿಗೆ ಭೇಟಿ ನೀಡಿದ್ದು,  ಮೋಹನ್ ಆಳ್ವಾರನ್ನು ವಿಚಾರಣೆ ಮಾಡುತ್ತಿದ್ದಾರೆ.

Comments are closed.