ರೆಸಾರ್ಟ್ ರಾಜಕೀಯ ಹೊಸತೇನಲ್ಲ, ನಮ್ಮನ್ನು ಟೀಕಿಸೋ ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ : ಡಿಕೆಶಿ

ರಾಮನಗರ : ರೆಸಾರ್ಟ್ ರಾಜಕಾರಣ ಹೊಸತೇನಲ್ಲ. ಈ ಬಗ್ಗೆ ಟೀಕಿಸುವ ಮೊದಲು ಬಿಜೆಪಿ ಹಾಗೂ ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.  ರೆಸಾರ್ಟಿನಲ್ಲಿ ಗುಜರಾತ್ ಶಾಸಕರು ಚಟುವಟಿಕೆಯಿಂದ ಇದ್ದಾರೆ. ಗಾಂಧಿ ನಾಡಿನಿಂದ ಬಂದಿರುವ ಅವರು ಸಭ್ಯರಾಗಿದ್ದು, ಅವರಿಂದ ನಾವು ಕಲಿಯುವುದು ಸಾಕಷ್ಟಿದೆ. ಅವರನ್ನು ನಮ್ಮ ವಿಧಾನ ಸೌಧಕ್ಕೆ ಕರೆದೊಯ್ಯುಲೂ ಚಿಂತನೆ ನಡೆದಿದೆ. ಆದರೆ ಗುಂಪಾಗಿ ಕರೆದೊಯ್ಯಲು ಮಾಧ್ಯಮಗಳು ಬಿಡುತ್ತಿಲ್ಲ ಎಂದರು.  ರೆಸಾರ್ಟ್ ವಾಸ್ತವ್ಯಕ್ಕೆ ತಗುಲುವ ವೆಚ್ಚವನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಭರಿಸಲಿದೆ. ನಾನೂ ಸಹ ನನ್ನ ವೆಚ್ಚವನ್ನು ಕ್ರೆಡಿಟ್ ಕಾರ್ಡಿನಿಂದ ಪಾವತಿಸಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ದುಬಾರಿ ವಾಚ್ ಪ್ರಕರಣ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವಿಧಾನಸಭೆ ಸ್ವೀಕರ್ ಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿ, ಅವರಿಗೆ ಲೀಡರ್ ಆಗಬೇಕು ಎನ್ನುವ ಆಸೆ ಇದ್ದರೆ ಚುನಾವಣೆಗೆ ಸ್ಪರ್ಧಿಸಲಿ. ಅದನ್ನು ಬಿಟ್ಟು ಇಲ್ಲದ ಆರೋಪ ಮಾಡಿ ಪ್ರಚಾರ ಪಡೆಯುವುದು ಸರಿಯಲ್ಲ ಎಂದರು.

 

Comments are closed.

Social Media Auto Publish Powered By : XYZScripts.com