ಅಮೇಥಿಯ ಅಣ್ಣಂದಿರು ತಂಗಿಯರಿಗೆ ರಕ್ಷಾ ಬಂಧನಕ್ಕೆ ಕೊಟ್ಟ ಗಿಫ್ಟ್ ಏನು !?

ಅಮೇಥಿ : ಅಣ್ಣ ತಂಗಿಯರ ಮಧ್ಯದ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬ ಹತ್ತಿರ ಬರುತ್ತಿದೆ. ಸಾಮಾನ್ಯವಾಗಿ ರಕ್ಷಾ ಬಂಧನ ಕಟ್ಟಿದ ಹೆಣ್ಣು ಮಕ್ಕಳಿಗೆ ಅಣ್ಣಂದಿರು ಬಗೆ ಬಗೆಯ ಉಡುಗೊರೆ ನೀಡುವುದನ್ನು ನೋಡಿಯೇ ಇರುತ್ತೇವೆ. ಆದರೆ ಅಮೇಥಿಯಲ್ಲಿ ಮಾದರಿ ಅಣ್ಣಂದಿರು ತಮ್ಮ ತಂಗಿಯರಿಗೆ ರಕ್ಷಾಬಂಧನದ ಉಡುಗೊರೆಯಾಗಿ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ.

ನೈರ್ಮಲ್ಯ ಹಾಗೂ ಮಹಿಳೆಯರ ಗೌರವವನ್ನು ಗಮನದಲ್ಲಿಟ್ಟುಕೊಂದು ಅಮೇಥಿಯ ಅಣ್ಣಂದಿರು “ಅನೋಕಿ ಅಮೇಥಿ ಕಾ ಅನೋಕಾ ಭಾಯ್‌” ಎಂಬ ಕ್ಯಾಂಪೇನ್‌ ನಡೆಸಿದ್ದಾರೆ. ಈ ಯೋಜನೆ ಕುರಿತು ಅಮೇಥಿಯ ಮುಖ್ಯ ಅಭಿವೃದ್ದಿ ಅಧಿಕಾರಿ ಅಪೂರ್ವ ದುಬೆ ಹೇಳಿಕೆ ನೀಡಿದ್ದು, ಅಮೇಥಿ ಮಾತ್ರವಲ್ಲದೆ ಸುತ್ತಮುತ್ತಲ ಹಳ್ಳಿಗಳಿಂದ 854 ಮಂದಿ ತಾನು ಅಣ್ಣ ಎಂದುಕೊಂಡು ಹೆಸರನ್ನು ನೊಂದಾಯಿಸಿಕೊಂಡಿದ್ದು, ರಕ್ಷಾ ಬಂಧನದ ದಿನ ತಮ್ಮ ಸಹೋದರಿಯರಿಗೆ ಶೌಚಾಲಯವನ್ನು ಉಡುಗೊರೆಯಾಗಿ ನೀಡಲು ಸಮ್ಮತಿಸಿದ್ದಾರೆ.

ಹೆಸರನ್ನು ನೊಂದಾಯಿಸಿಕೊಂಡಿರುವ ಎಲ್ಲಾ ಅಣ್ಣಂದಿರೂ ತಮ್ಮಸ್ವಂತ ಖರ್ಚಿನಲ್ಲೇ ಸಹೋದರಿಯರಿಗಾಗಿ ಶೌಚಾಲಯ ಕಟ್ಟಿಸಲು ಸಿದ್ಧರಿದ್ದಾರೆ. ಇಂತಹವರಿಗೆ ಪ್ರೋತ್ಸಾಹ ನೀಡಲು ಲಕ್ಕಿ ಡ್ರಾ ಸ್ಪರ್ಧೆ ಏರ್ಪಡಿಸಿದ್ದು, ಮೂರು ಜನ ವಿಜೇತರಿಗೆ 50,000ರೂ ಹಾಗೂ ಮೊಬೈಲ್‌ ನೀಡಲು ನಿರ್ಧರಿಸಲಾಗಿದೆ.

Comments are closed.