‘ ಇದು ಹಿಂದೂಸ್ತಾನ, ಇದನ್ನು ಲಿಂಚಿಸ್ತಾನ್ ಮಾಡಬೇಡಿ ‘ : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ‘ ಇದು ಹಿಂದೂಸ್ತಾನ, ಹಿಂದೂಸ್ತಾನವಾಗಿರಲು ಬಿಡಿ, ಇದನ್ನು ಲಿಂಚಿಸ್ತಾನ್ (lynch-stan) ಮಾಡಬೇಡಿ ‘ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಗುಡುಗಿದ್ದಾರೆ.

ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ ಖರ್ಗೆ ಸಾಮೂಹಿಕ ಹಿಂಸಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು,                    ‘ ಸರಕಾರವೇ ನೇರವಾಗಿ ಇದನ್ನು ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಆದರೆ ಸರಕಾರ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ವಿಎಚ್ ಪಿ, ಭಜರಂಗ ದಳ ಹಾಗೂ ಗೋರಕ್ಷಕ ಸಂಘಟನೆಗಳಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ‘ ಎಂದು ಆರೋಪಿಸಿದರು.

'This Is Hindustan, Don't Make It Lynchistan': Congress In Parliament

‘ ಒಂದು ಕಡೆ ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿರುವವರನ್ನು ವಿರೋಧಿಸುತ್ತೀರಿ, ಆದರೆ ಅಂತಹವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ..? ‘ ಎಂದು ಕೇಳಿದ್ದಾರೆ. ಸಾಮೂಹಿಕ ಹಿಂಸಾಚಾರದ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸದನದಲ್ಲಿ ಉತ್ತರಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

Comments are closed.