ಜ್ವಾಲಾ ಗುಟ್ಟಾಗೆ ಮನದಲ್ಲಿ ಜ್ವಾಲೆ ಹತ್ತಿದ್ದು ಯಾಕೆ ? ಟ್ವಿಟರ್‌ನಲ್ಲಿ ಅವರ ಅಮ್ಮನ ಬಗ್ಗೆ ಬಂದ ಟೀಕೆಯಾದರೂ ಏನು ?

ದೆಹಲಿ : ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟಾ ತಮ್ಮ ಟ್ವಿಟರ್‌ ಫಾಲೋವರ್‌ ಮೇಲೆ ಫುಲ್‌ ಗರಂ ಆಗಿದ್ದಾರೆ. ಟ್ವಿಟರ್‌ನಲ್ಲಿ ಜ್ವಾಲಾ ಫಾಲೋವರ್‌ ಒಬ್ಬ ನಿಮ್ಮ ತಾಯಿ ಏಲನ್ ಗುಟ್ಟಾ  ಒಬ್ಬ ಚೀನಾದ ಮಹಿಳೆ. ಅದಕ್ಕಾಗಿ ನಿಮಗೆ ಮೋದಿ ಅವರನ್ನು ಕಂಡರೆ ಆಗುವುದಿಲ್ಲ ಎಂದಿದ್ದಾನೆ. ಇದಕ್ಕೆ ಜ್ವಾಲಾ ಆಕ್ರೋಶ ವ್ಯಕ್ತಪಡಿಸಿದ್ದು, ಜ್ವಾಲಾ ತನ್ನ ತಾಯಿಯೊಂದಿಗಿನ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿ ಉತ್ತರ ನೀಡಿದ್ದಾರೆ.

ಇದಕ್ಕೆ ಫಾಲೋವರ್‌ ಮರು ಟ್ವೀಟ್‌ ಮಾಡಿದ್ದು, ನಿಮ್ಮ ತಾಯಿ ಚೀನಾದವರಾದ ಮಾತ್ರಕ್ಕೆ ಪ್ರತೀ ಬಾರಿಯೂ ನೀವು ಮೋದಿ ಅವರನ್ನು ಏಕೆ ವಿರೋಧಿಸುತ್ತೀರಿ ಎಂದಿದ್ದಾರೆ. ಅದಕ್ಕೆ ಜ್ವಾಲಾ ಮಾತನಾಡುವುದಕ್ಕೂ ಮುನ್ನ ಎರೆಡೆರಡು ಬಾರಿ ಯೋಚಿಸಿ. ನನ್ನ ತಾಯಿಯನ್ನು ಮಾತಿನ ಮದ್ಯೆ ಎಳೆಯಬೇಡಿ ಎಂದು ಕಮೆಂಟ್ ಮಾಡಿದ್ದು, ಫಾಲೋವರ್‌ನನ್ನು ಬ್ಲಾಕ್‌ ಮಾಡಿದ್ದಾರೆ.

 

Comments are closed.