ಜಲಾಶಯ ಕಟ್ಟಿಸಿದ್ದು ಪಕ್ಕದ ರಾಜ್ಯಕ್ಕೆ ನೀರು ಬಿಡೋಕಾ : ಕುಮಾರಸ್ವಾಮಿ

ಉಡುಪಿ : ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿ ‘ ಕರಾವಳಿ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಭಾವನಾತ್ಮಕ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿವೆ. ಧರ್ಮ ಮತ್ತು ಸಮಾಜಕ್ಕೆ ಹೆಚ್ಚಿನ ಆಧ್ಯತೆ ಕೊಡುತ್ತಿದೆ. ಕರಾವಳಿಯ ಅಭಿವೃದ್ಧಿಗೆ ಇದು ಮಾರಕವಾಗಲಿದೆ.  ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದೆ ನುಡಿದಂತೆ ನಡೆದಿದ್ದೇವೆ ಅಂತ ಪ್ರಚಾರ ಪಡೆಯುತ್ತಿದ್ದಾರೆ. ಭಾಗ್ಯ ಯೋಜನೆ ಸಮಸ್ಯೆ ಬಗೆಹರಿಸಿದ್ದೇವೆ ಅಂತ ಹೇಳುತ್ತಿದ್ದಾರೆ. ರೈತರ ಆತ್ಮಹತ್ಯೆ ಮುಂದುವರೆದಿದೆ. ಇದು ಸರ್ಕಾರದ ಸಾಧನೆಯೇ!? ಜಲಾಶಯಗಳಿಂದ ಕೆರೆ ತುಂಬಿಸಿ ಎಂದು ನಾನು ಹೇಳಿದ್ದು ಸಿಎಂ ಸಿದ್ದರಾಮಯ್ಯ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾಲ್ಕು ಜಲಾಶಯ ಪಕ್ಕದ ರಾಜ್ಯಕ್ಕೆ ನೀರು ಕೊಡಲು ಕಟ್ಟಿಸಿಕೊಂಡಿದ್ದಾ!? ಜಾಲಾಶಯದ ನೀರು ನಮ್ಮ ಕೆರೆಗಳಿಗೂ ಹರಿಯಲಿ ಹಾರಂಗಿ ನೀರು ಪಕ್ಕದ ರಾಜ್ಯಕ್ಕೆ ಹರಿಯುವುದನ್ನು ತಡೆಯಲಿ ‘ ಎಂದು ಹೇಳಿದರು.

ಕರಾವಳಿ ಕೋಮುಗಲಭೆ ವಿಚಾರವಾಗಿ ಮಾತನಾಡಿದ ಎಚ್ಡಿಕೆ ‘ ಸಿಎಂ – ಸಚಿವರು ಹಲವು ದಿನ ಮೌನವಾಗಿದ್ದರು .ಗೃಹ ಇಲಾಖೆ ರಮಾನಾಥ ರೈ ಪಾಲಾಗಲಿದೆ ಎಂದು ಕೇಳಿ ಬರುತ್ತಿದೆ. ರಮಾನಾಥ ರೈ ಹೆಸರಿಗೆ ಮಾತ್ರ ಗೃಹಮಂತ್ರಿ ಆಗ್ತಾರೆ ಆದ್ರೆ ನಿಜವಾದ ಗೃಹ ಮಂತ್ರಿ ಕೆಂಪಯ್ಯ. ರೈ ಹೆಬ್ಬೆಟ್ಟು ಒತ್ತಲು ಮಾತ್ರ ಗೃಹ ಮಂತ್ರಿಯಾಗ್ತಾರೆ. ಕೆಂಪಯ್ಯ ಸಿದ್ದರಾಮಯ್ಯನಿಗೆ ಯಾಕೆ ಅನಿವಾರ್ಯ? ‘ ಎಂದು ಲೇವಡಿ ಮಾಡಿದ್ದಾರೆ.

‘ ಇತರೆ ಪಕ್ಷಗಳನ್ನು ಬಿಜೆಪಿ ನಾಶ ಮಾಡಲು ಹೊರಟಿದೆ. ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ. ಅಂದು ರಾಜ್ಯದಲ್ಲಿ 7 ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಹೈಜಾಕ್ ಮಾಡಿತ್ತು. ಗುಜರಾತ್ ಬೆಳವಣಿಗೆ ಇದರ ಪ್ರತಿಫಲ. ರೆಸಾರ್ಟ್ ಗೆ ಇಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳ ನೇಮಕವಾಗಿದೆ. ರಾಜ್ಯಕ್ಕೆ ಮೊದಲು ರಕ್ಷಣೆ ಕೊಡಿ. ಪ್ರಜಾಪ್ರಭುತ್ವ ಕತ್ತು ಹಿಸುಕುವುದನ್ನು ಅಂದು ನೀವು ಮಾಡಿದ್ದಿರಿ ‘ ಎಂದು ಹೇಳಿದರು.

ಮಂಗಳೂರಿನ ರಸ್ತೆಗೆ ನಾಮಕರಣ ವಿವಾದವಾಗಿ ಮಾತನಾಡಿ ‘ ದ.ಕ ಜಿಲ್ಲೆಯ ಶಾಸಕರದ್ದು ಡಬ್ಬಲ್ ಗೇಮ್ ನಡೆಯುತ್ತಿದೆ. ಸರ್ಕಾರವನ್ನು ದೇವರೇ ಕಾಪಾಡಬೇಕು. ಜನಸಾಮಾನ್ಯರ ಆಕ್ರೋಷಕ್ಕೆ ಗುರಿ ಮಾಡಬೇಡಿ. ಆಳ್ವಾಸ್ ಕಾಲೇಜು ಮೂರು ಲಕ್ಷ ಕುಟುಂಬಕ್ಕೆ ನೆರವಾಗಿದೆ. ಆ ಪ್ರಕರಣದ ಬಗ್ಗೆ ಚರ್ಚೆ ಆರಂಭವಾಗಿದೆ. ಸರ್ಕಾರ ಪ್ರಕರಣ ಸತ್ಯಾಸತ್ಯತೆ ಅರಿಯಬೇಕು. ಮಾಧ್ಯಮಗಳ ಮೂಲಕ ಜಡ್ಜ್ ಮೆಂಟ್ ಯಾಕೆ. ಮೋಹನ ಆಳ್ವ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. 26 ಸಾವಿರ ಮಕ್ಕಳು ಹಾಸ್ಟೆಲ್ ನಲ್ಲಿದ್ದಾರೆ. 4 ಸಾವಿರ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಪ್ರಕರಣಕ್ಕೆ ರೆಕ್ಕೆ ಪುಕ್ಕ ಕಟ್ಟಲಾಗುತ್ತಿದೆ. ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ. ಎಲ್ಲಾ ಸಂಘಟನೆಗಳು ರಾಜಕೀಯ ನಿಲ್ಲಿಸಬೇಕು ‘ ಎಂದು ಉಡುಪಿಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

‘ ಯಾವುದೇ ಇಲಾಖೆಯಲ್ಲಿ ಹಣ ಬಳಕೆಯಾಗಿಲ್ಲ. ಅಲ್ಪಸಂಖ್ಯಾತ ಇಲಾಖೆಯೂ ಇದರಿಂದ ಹೊರತಾಗಿಲ್ಲ. ಈ ಸರ್ಕಾರಕ್ಕೆ ದೂರದೃಷ್ಟಿಯಿಲ್ಲ. ಅಹಿಂದ ಎಂಬೂದು ಘೋಷಣೆಗೆ ಮಾತ್ರ. ಬರೀ ಮತ ಪಡೆಯಲು ಮಾತ್ರ. ಅಲ್ಪ ಸಂಖ್ಯಾತರ ಹೆಸರಿನ ಅನುದಾನ ಮಧ್ಯವರ್ತಿಗಳ ಪಾಲಾಗುತ್ತಿದೆ ‘ ಎಂದು ಉಡುಪಿಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

5 thoughts on “ಜಲಾಶಯ ಕಟ್ಟಿಸಿದ್ದು ಪಕ್ಕದ ರಾಜ್ಯಕ್ಕೆ ನೀರು ಬಿಡೋಕಾ : ಕುಮಾರಸ್ವಾಮಿ

 • October 18, 2017 at 12:27 PM
  Permalink

  Hey there would you mind sharing which blog platform you’re using? I’m going to start my own blog soon but I’m having a difficult time selecting between BlogEngine/Wordpress/B2evolution and Drupal. The reason I ask is because your layout seems different then most blogs and I’m looking for something completely unique. P.S Sorry for being off-topic but I had to ask!|

 • October 18, 2017 at 3:58 PM
  Permalink

  Hi there would you mind sharing which blog platform you’re using? I’m looking to start my own blog in the near future but I’m having a hard time selecting between BlogEngine/Wordpress/B2evolution and Drupal. The reason I ask is because your design and style seems different then most blogs and I’m looking for something completely unique. P.S Sorry for getting off-topic but I had to ask!|

 • October 20, 2017 at 6:56 PM
  Permalink

  Have you ever thought about publishing an ebook or guest authoring on other blogs? I have a blog centered on the same information you discuss and would love to have you share some stories/information. I know my visitors would enjoy your work. If you are even remotely interested, feel free to shoot me an e mail.|

 • October 21, 2017 at 3:06 AM
  Permalink

  Excellent way of describing, and fastidious article to get data regarding my presentation subject matter, which i am going to convey in academy.|

 • October 24, 2017 at 8:43 PM
  Permalink

  Can I just say what a aid to search out someone who truly knows what theyre talking about on the internet. You positively know how to bring a difficulty to mild and make it important. Extra individuals must learn this and understand this facet of the story. I cant imagine youre not more well-liked since you undoubtedly have the gift.
  make an leo man chase you http://www.youtube.com/watch?v=d-4u6Cg-Y6o

Comments are closed.