ನಾಲೆಗಳಿಗೆ ನೀರು ಬಿಡದೆ ನಾನು ಕುಡಿಯೋಕಾಗುತ್ತಾ : ಸಿದ್ದರಾಮಯ್ಯ

ಮೈಸೂರು: ನಾಲೆಗಳಿಗೆ ನೀರು ಹರಿಸುವಂತೆ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ‘ ನಾಲೆಗಳಿಗೆ ನೀರು ಬಿಡದೆ ನಾನು ಕುಡಿಯೋಕಾಗುತ್ತಾ..?’ ಎಂದು ಕೇಳಿದ್ದಾರೆ.
‘ ನಾನು ರೈತನೇ, ನನಗೂ ನಾಲೆಗಳಿಗೆ ನೀರು ಬಿಡಬೇಕು, ರೈತರಿಗೆ ನೀರು ಕೊಡಬೇಕು ಅಂತ ಗೊತ್ತಿದೆ. ಆದರೆ ನಮ್ಮ ಬಳಿ ನೀರು ಇಲ್ಲ. ಈ ಕಾರಣಕ್ಕಾಗಿ ನಾಲೆಗಳಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡಲು ಆಗಸ್ಟ್ 5 ರಂದು ಸಭೆ ಕರೆದಿದ್ದೇನೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕು. ನಾವು ನ್ಯಾಯಾಲಯದ ಆದೇಶ ಪಾಲನೆ ಮಾಡದೆ ಇರಲಾಗದು ‘ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮಹಾದಾಯಿ ವಿಚಾರದ ಬಗ್ಗೆ ಮಾತನಾಡಿದ ಸಿಎಂ ‘ ಗೋವಾ ಸಿಎಂ ಅವರದ್ದು ಉದ್ದಟತನದ ವರ್ತನೆಯಾಗಿದೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಬ್ಬ ಮುಖ್ಯಮಂತ್ರಿ ಪತ್ರ ಬರೆದರೆ ಮುಖ್ಯಮಂತ್ರಿಯೇ ಉತ್ತರ ಬರೆಯಬೇಕು. ಆದ್ರೆ ಗೋವಾ ಸಿಎಂ ನೀರಾವರಿ ಸಚಿವರಿಂದ ಉತ್ತರ ಬರೆಸುತ್ತಾರೆ. ರಾಜ್ಯ ಸರ್ಕಾರ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ ಅಂತ ಬರೆದಿದ್ದಾರೆ.  ಇದರಲ್ಲೆ ಗೊತ್ತಾಗುತ್ತೆ ಅವರ ಉದ್ದಟನದ ಎಷ್ಟಿದೆ ಎಂದು.
ಈ ಬಗ್ಗೆ ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಬೇಕು. ಒಕ್ಕೂಟ ವ್ಯವಸ್ಥೆಯ ಯಜಮಾನನಾಗಿ ಮೋದಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥ ಮಾಡಬೇಕು. ಹಿಂದೆ ಇಂದಿರಾಗಾಂಧಿಯವರು ಹಲವು ರಾಜ್ಯಗಳ ಸಮಸ್ಯೆಯನ್ನು ಬಗೆಹರಿಸಿದ್ದರು.  ಆದ್ರೆ ಮೋದಿ ಅವರ ಜವಬ್ದಾರಿಯಿಂದ ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಸಂಸದರು ಬರಿ ಭಾಷಣ ಮಾಡೋಕೆ ಇದ್ದಾರಾ? ಅವರೆಲ್ಲ ರಾಜ್ಯದ ಹಿತ ಕಾಪಾಡಬೇಕು ಅನ್ನೋದನ್ನು ಗಮನದಲ್ಲಿ ಇಟ್ಟುಕೊಂಡಿಲ್ಲವಾ?’ ಎಂದು ಮೈಸೂರಿನಲ್ಲಿ ಕಿಡಿ ಕಾರಿದ್ದಾರೆ.

Comments are closed.

Social Media Auto Publish Powered By : XYZScripts.com