ನಾಗರ ಪಂಚಮಿಯ ದಿನ ವ್ಯಾಪಾರವಾದ ಹಾಲಿನ ಪ್ರಮಾಣ ಕೇಳಿದ್ರೆ ಶಾಕ್ ಆಗ್ತೀರಾ..?

ಬೆಂಗಳೂರು : ನಾಗರಪಂಚಮಿ ಹಬ್ಬವನ್ನು ರಾಜ್ಯದೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗಿದೆ. ಈ ಹಬ್ಬದ ದಿನ ನಾಗರಕಲ್ಲಿಗೆ ಹಾಲೆರೆಯುವ ಮೂಲಕ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಪೂಜಾವಿಧಾನದಲ್ಲಿ ಅತೀ ಹೆಚ್ಚು ಬಳಕೆಯಾಗೋದು ನಂದಿನಿ ಹಾಲು. ಈ ಬಾರಿ ನಾಗರಪಂಚಮಿಯ ಸಂದರ್ಭದಲ್ಲಿ ಕೆಎಂಎಫ್ ಗೆ ಹಾಲಿನ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ಪ್ರತಿದಿನ ಕೆಎಂಎಫ್ 35ರಿಂದ 36ಲಕ್ಷ ಲೀಟರ್ ಹಾಲನ್ನು ಕರ್ನಾಟಕದಲ್ಲಿ ಮಾರಾಟ ಮಾಡುತ್ತದೆ. ಆದ್ರೆ ನಾಗರಪಂಚಮಿ ಹಬ್ಬದ ಪ್ರಯುಕ್ತ ಬರೋಬ್ಬರಿ 60 ಸಾವಿರ ಲೀಟರ್ ಹೆಚ್ಚುವರಿ ಹಾಲು ನಾಗಪಂಚಮಿಯ ದಿನ ಮಾರಾಟವಾಗಿದೆ. ಪ್ರತೀ ವರ್ಷವೂ ನಾಗರಪಂಚಮಿಗೆ ಹೆಚ್ಚಿನ ಪ್ರಮಾಣದ ಹಾಲಿಗೆ ಬೇಡಿಕೆ ಬರುತ್ತದೆ. ಹಾಗಾಗಿ ಹೆಚ್ಚುವರಿ ಹಾಲಿನ ಶೇಖರಣೆ, ಪ್ಯಾಕಿಂಗ್ ಮತ್ತು ಸರಬರಾಜು ಮಾಡಲು ಸಕಲ ಸಿದ್ಧತೆಯನ್ನೂ ಕೆಎಂಎಫ್ ಮಾಡಿಕೊಂಡಿತ್ತು.

ನಾಗರಕಲ್ಲಿಗೆ ಹಾಲೆರೆಯುವವರು ಹೆಚ್ಚಾಗಿ ನಂದಿನಿ ಹಾಲನ್ನೇ ಬಳಸುತ್ತಾರೆ. ಇದರ ಜೊತೆಗೆ ತುಪ್ಪದಲ್ಲೂ ಅಭಿಷೇಕ ಮಾಡುವ ಪರಿಪಾಠ ಕೂಡಾ ಅನೇಕರಲ್ಲಿದೆ. ಹಾಗಾಗಿ ಹಾಲಿನ ಜೊತೆಗೆ ತುಪ್ಪದ ವ್ಯಾಪಾರವೂ ಜಾಸ್ತಿಯಾಗಿದೆ. ಪ್ರತಿದಿನ 50 ಸಾವಿರ ಕೆಜಿ ವ್ಯಾಪಾರವಾಗುವ ತುಪ್ಪ ನಾಗರಪಂಚಮಿಯಂದು 60 ಸಾವಿರ ಕೆಜಿಯಷ್ಟು ಹೆಚ್ಚು ಮಾರಾಟವಾಗಿದೆ.

Comments are closed.

Social Media Auto Publish Powered By : XYZScripts.com