IND vs SL : 17 ನೇ ಟೆಸ್ಟ್ ಸೆಂಚುರಿ ಬಾರಿಸಿದ ಕೊಹ್ಲಿ, ಲಂಕಾಗೆ 550 ರನ್ ಟಾರ್ಗೆಟ್

ಮೊದಲ ಟೆಸ್ಟ್ ನ 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್  ಕಳೆದುಕೊಂಡು 240 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಭಾರತ ಒಟ್ಟು 549 ರನ್ ಮುನ್ನಡೆ ಸಾಧಿಸಿದಂತಾಗಿದೆ. ಶುಕ್ರವಾರ 76 ರನ್ ಗಳಿಸಿ ಅಜೇಯರಾಗುಳಿದಿದ್ದ ನಾಯಕ ವಿರಾಟ್ ಕೊಹ್ಲಿ (103*) ಶತಕ ಬಾರಿಸಿ ನಾಟೌಟ್ ಆಗಿಯೇ ಉಳಿದರು. ಇದು ಟೆಸ್ಟ್ ನಲ್ಲಿ ಕೊಹ್ಲಿಯ 17 ನೇ ಶತಕವಾಗಿದೆ. ಲಂಕಾ ತಂಡಕ್ಕೆ ಗೆಲ್ಲಲು ಎರಡನೇ ಇನ್ನಿಂಗ್ಸ್ ನಲ್ಲಿ 550 ರನ್ ಅವಶ್ಯಕತೆಯಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ಮನ್ ತರಂಗಾ ಔಟ್ ಆಗಿದ್ದು, ತಂಡದ ಸ್ಕೋರ್ 5 ಓವರ್ ಗಳಲ್ಲಿ 29/1 ಆಗಿದೆ.

Comments are closed.

Social Media Auto Publish Powered By : XYZScripts.com