ಆಮೆ ವೇಗದಲ್ಲಿದ್ದ ಸರ್ಕಾರ ಇದ್ದಕ್ಕಿದ್ದಂತೆ ಸ್ಪೀಡ್‌ ಆಗಿದ್ದು ಹೇಗೆ ? : ಎಚ್.ವಿಶ್ವನಾಥ್

ಬಾಗಲಕೋಟೆ : ರಾಷ್ಟ್ರೀಯ ಪಕ್ಷಗಳಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ ಎಂದು  ಮಾಜಿ ಸಚಿವ ಎಚ್‌ ವಿಶ್ವನಾಥ್ ದೆಹಲಿಯ ಹಿಂದಿ ಜನರ ದರ್ಪ ಧೋರಣೆ ಬಗ್ಗೆ ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಹುಣಸೂರು ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತಿಳಿಸಿದ್ದಾರೆ. ಮುಂದೆ ಬೃಹತ್ ಸಮಾವೇಶ ಮಾಡಿ ಅಧಿಕೃತವಾಗಿ ಹುಣಸೂರ ಅಭ್ಯರ್ಥಿಯ ಘೋಷಣೆಯಾಗಲಿದೆ ಎಂದಿದ್ದಾರೆ.

ಇದೇ ವೇಳೆ ಪ್ರಜ್ವಲ್ ರೇವಣ್ಣ ಜೆ ಡಿ ಎಸ್ ನಲ್ಲಿ ಸೂಟ್ ಕೇಸ್ ರಾಜಕಾರಣ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಪ್ರಜ್ವಲ್ ರೇವಣ್ಣನದ್ದು ಇನ್ನು ಬಿಸಿರಕ್ತ. ಆವೇಷದಲ್ಲಿ ಆ ರೀತಿ ಮಾತನಾಡಿರಬಹುದು. ಅವನಿನ್ನೂ ಟೀನೇಜ್ ಬಾಯ್. ಅನುಭವ ಇದ್ದೋರು ಹೇಳಿದರೆ ಗಂಭೀರವಾಗಿ ಪರಿಗಣಿಸಬಹುದಿತ್ತು. ಲಿಂಗಾಯತ ಪ್ರತ್ಯೇಕ ಧರ್ಮವಿಚಾರದಲ್ಲಿ ಜೆ ಡಿ ಎಸ್ ನದ್ದು ತಟಸ್ಥ ನಿಲುವು ಎಂದಿದ್ದಾರೆ.

ಸಿದ್ದರಾಮಯ್ಯ ಕೆಲವೊಂದಿಷ್ಟು ಭಾಗ್ಯ ಕೊಟ್ಟಿದ್ದಾರೆ. ಶಾಶ್ವತವಾಗಿ ಅನುಕೂಲವಾಗುವ ಯಾವ ಕಾರ್ಯ ಮಾಡಿದ್ದಾರೆ. ನಾಲ್ಕು ವರ್ಷದಲ್ಲಿ ಆಮೆ ವೇಗದಲ್ಲಿದ್ದ ಸರಕಾರ ಇದ್ದಕ್ಕಿದ್ದಂತೆ ಸ್ಪೀಡ್ ಆಗಿದೆ. ಲಿಂಗಾಯತ ಪ್ರತ್ಯೇಕತೆ ಬಗ್ಗೆ ಸಿದ್ದರಾಮಯ್ಯನವರನ್ನು ಯಾವುದೇ ಲಿಂಗಾಯತರು ಕೇಳಿರಲಿಲ್ಲ. ಯಾಕೆ ಆ ಸಮುದಾಯದ ಮಧ್ಯೆ ಬೆಂಕಿ ಹಚ್ಚುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

 

 

 

Comments are closed.