ಅಮೆರಿಕಕ್ಕೆ ಉ. ಕೊರಿಯಾ ಸೆಡ್ಡು: ಮತ್ತೊಂದು ಖಂಡಾಂತರ ಕ್ಷಿಪಣಿ ಉಡಾವಣೆ

ಸಿಯೋಲ್‌ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಂಗ್‌ ಉನ್‌ ಅಮೆರಿಕಕ್ಕೆ ಸೆಡ್ಡು ಹೊಡೆದು ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ್ದಾರೆ. ಜೊತೆಗೆ ಈ ಕ್ಷಿಪಣಿ ಇಡೀ ಅಮೆರಿಕವನ್ನು ನಾಶಮಾಡಬಲ್ಲ ಸಾಮರ್ಥ್ಯ ಹೊಂದಿರುವುದಾಗಿ ಎಚ್ಚರಿಸಿದ್ದಾರೆ.

ಉತ್ತರ ಕೊರಿಯಾದ ಐಸಿಬಿಎಂ ಕ್ಷಿಪಣಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಇದು ಅಮೆರಿಕಕ್ಕೆ ನೀಡುತ್ತಿರುವ ಎಚ್ಚರಿಕೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕ್ಷಿಪಣಿ 47 ನಿಮಿಷಗಳಲ್ಲಿ 3724 ಕಿ.ಮೀ ತಲುಪುವ ಸಾಮರ್ಥ್ಯ ಇರುವುದಾಗಿ ಮೂಲಗಳು ತಿಳಿಸಿವೆ.

ಶಸ್ತ್ರಾಸ್ತ್ರಗಳು ಉತ್ತರಕೊರಿಯಾದ ಅಮೂಲ್ಯ ಸಂಪತ್ತು ಅವುಗಳು ಅಚ್ಚರಿಯ ದಾಳಿ ನಡೆಸಬಲ್ಲವು’ ಎಂದು  ಕಿಮ್‌ ಜೊಂಗ್‌ ಹೇಳಿದ್ದಾರೆ. ವಿಶ್ವಸಂಸ್ಥೆ ಹಾಗೂ ಅಮೆರಿಕದ ವಿರೋಧದ ನಡುವೆಯೇ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

Comments are closed.

Social Media Auto Publish Powered By : XYZScripts.com