‘ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದೀರಿ ‘ : ಮಹಿಳಾ ಕ್ರಿಕೆಟಿಗರಿಗೆ ಪ್ರಧಾನಿ ಶ್ಲಾಘನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ‘ದೇಶದ ಹಲವಾರು ಹೆಣ್ಣು ಮಕ್ಕಳಂತೆ, ನೀವೂ ಸಹ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದೀರಿ ‘ ಎಂದು ಹೇಳಿದ್ದಾರೆ. ಇದೇ ತಿಂಗಳ 23 ರಂದು ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಫೈನಲ್ ತಲುಪಿದ್ದ ಮಿಥಾಲಿ ಬಳಗ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು.

ಮೋದಿ ಪ್ರತಿಯೊಬ್ಬ ಆಟಗಾರ್ತಿಯರನ್ನು ಮಾತನಾಡಿಸಿ, ವೈಯಕ್ತಿಕವಾಗಿ ಅಭಿನಂದಿಸಿದ್ದಾರೆ. ಟ್ವಿಟರ್ ನಲ್ಲಿ ತಂಡದ ಎಲ್ಲ ಆಟಗಾರರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.  ‘ ಮಹಿಳಾ ಕ್ರಿಕೆಟ್ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿರುವುದು ಹೆಮ್ಮೆ, ಸಂತೋಷ ಹಾಗೂ ಪ್ರೇರಣೆಯನ್ನುಂಟು ಮಾಡಿದೆ ‘ ಎಂದು ಆಟಗಾರ್ತಿಯರು ಹೇಳಿದ್ದಾರೆ.

ಆಟಗಾರರು ಒತ್ತಡವನ್ನು ನಿಭಾಯಿಸುವುದು ಹೇಗೆ ಎಂದು ಕೇಳಿದಾಗ ಮೋದಿ ‘ ‘ಯೋಗ ದೇಹ ಮತ್ತು ಮನಸ್ಸುಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ನಿರ್ಲಿಪ್ತತೆಯನ್ನು ಸಾಧಿಸಬಹುದು ‘ ಎಂದು ಹೇಳಿದರು. ಮಹಿಳಾ ಆಟಗಾರರು ತಮ್ಮ ಸಹಿ ಇರುವ ಬ್ಯಾಟ್ ಅನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

  

 

 

 

 

 

 

Comments are closed.

Social Media Auto Publish Powered By : XYZScripts.com