ನನ್ನ ಪಥ ಈಗ ಕುಮಾರ ಪಥದತ್ತ ಸಾಗಿದೆ : ಎಚ್. ವಿಶ್ವನಾಥ್

ಬೆಂಗಳೂರು : ನಾನು ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದೇನೆ, ಕಾಂಗ್ರೆಸ್ ಬಿಟ್ಟಿದ್ದಕ್ಕೆ ಹಲವಾರು ಕಾರಣಗಳಿವೆ. ಇದೆಲ್ಲಾ ನಿಮಗೆ ತಿಳಿದ ವಿಚಾರವೆ, ಆದರೆ ನಾನು ಜೆಡಿಎಸ್ ಗೆ ಬರಲು ಬಲವಾದ ಕಾರಣ ಇದೆ, ಕಾಂಗ್ರೆಸ್ ಮತ್ತು ಬಿಜೆಪಿಯ ಆಡಳಿತವನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಜೆಡಿಎಸ್ ಈಗ ಕ್ರಾಂತಿಕಾರಿ ವಿಚಾರಗಳನ್ನು ಕೈಗೆತ್ತಿಕೊಂಡಿದೆ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿದ್ದಾರೆ.

ಸ್ವತಂತ್ರ ಬಂದಾಗಿನಿಂದಲೂ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಅವರಿಂದ ರಾಜ್ಯಕ್ಕೆ ಸಮರ್ಪಕವಾದ ನ್ಯಾಯ ಸಿಕ್ಕಿಲ್ಲ, ನನ್ನ ರಾಜಕೀಯ ಸಂಧ್ಯಾಕಾಲದಲ್ಲಿ ಪ್ರಾಂತೀಯ ಪಕ್ಷ ಸೇರುವ ಮೂಲಕ ಕನ್ನಡ ನಾಡಿನ ಸೇವೆ ಮಾಡುವುದಾಗಿ ಹೇಳಿದ್ದಾರೆ.

ಯಾರನ್ನು ನಾನು ಮುಖ್ಯಮಂತ್ರಿ ಮಾಡಲು ಎಷ್ಟೆಲ್ಲಾ ಶ್ರಮ ಹಾಕಿದನೋ, ಅದೇ ವ್ಯಕ್ತಿ ನನ್ನನ್ನು ಕಾಂಗ್ರೆಸ್ ನಿಂದ ಹೊರಹಾಕಲು ಮುಂದಾದರು, ಹೀಗಾಗಿ ನನಗೆ ಕಾಂಗ್ರೆಸ್ ಬಿಟ್ಟದ್ದಕ್ಕೆ ಬೇಸರ ಇಲ್ಲ, ಪ್ರಾದೇಶಿಕ ಪಕ್ಷ ಜೆಡಿಎಸ್ ನಾಡಿನ ನೆಲ ಜಲದ ಬಗ್ಗೆ ಧನಿ ಎತ್ತುತ್ತಿದೆ, ಹೀಗಾಗಿ ನಾನು ರಾಜ್ಯಾದ್ಯಂತ ಜೆಡಿಎಸ್ ಪರ ಸಂಘಟನೆಗೆ ಮುಂದಾಗಿದ್ದೇನೆ, ಕಾಂಗ್ರೆಸ್ ಭಾಗ್ಯಗಳ ಅಲೆಯಲ್ಲಿ ತೇಲುತ್ತಿದೆ, ಬಿಜೆಪಿ ಇಲ್ಲದ ಕೊಲೆಗಳನ್ನ ಬಿಂಬಿಸುತ್ತಾ ಕಾಲಹರಣ ಮಾಡುತ್ತಿದೆ, ಹೀಗಾಗಿ ಜೆಡಿಎಸ್ ನ ಹೊಸ ಯೋಜನೆಗಳು ಭರವಸೆಗಳನ್ನ ಜನರ ಬಳಿ ಕೊಂಡೊಯ್ಯುವ ಕೆಲಸ ಮಾಡುತ್ತೇವೆ, ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ, ಅವರು ಒಳ್ಳೇ ಆಡಳಿತ ಕೊಡುತ್ತಾರೆ ಎಂಬ ವಿಶ್ವಾಸ ಇದೆ, ಹೀಗಾಗಿ ನಾನು ನನ್ನ ಪಥವನ್ನು ಕುಮಾರಪಥದತ್ತ ಬದಲಿಸಿಕೊಂಡಿದ್ದೇನೆ ಎಂದಿದ್ದಾರೆ.

ಸರ್ಕಾರಗಳು ಧರ್ಮದ ಜೊತೆ ಆಟ ಆಡಬಾರದು. ರಾಜಕೀಯ ಲಾಭಕ್ಕೆ ಧರ್ಮಗಳನ್ನು ಬಳಸಬಾರದು. ಒಂದು ಶತಮಾನದಿಂದ ಯಾವುದೇ ಧರ್ಮದ ಬಗ್ಗೆ ಯಾವ ಸರ್ಕಾರಗಳೂ ತೀರ್ಮಾನ ತೆಗೆದುಕೊಂಡಿರಯವ ಇತಿಹಾಸ ಇಲ್ಲ, ಹೀಗಾಗಿ ಧರ್ಮದ ಹೆಸರಲ್ಲಿ ಬೆಂಕಿಹಚ್ಚಬೇಡಿ,

Comments are closed.

Social Media Auto Publish Powered By : XYZScripts.com