ಕಾಂಗ್ರೆಸ್‌ಗೆ ಮತ್ತೆ ಆಘಾತ : ಗುಜರಾತ್‌ ಕಾಂಗ್ರೆಸ್‌ಗೆ ಕೈ ಕೊಟ್ಟ ಮತ್ತಿಬ್ಬರು ಶಾಸಕರು

ಗುಜರಾತ್ : ಗುಜರಾತ್‌ನಲ್ಲಿ  ಕಾಂಗ್ರೆಸ್‌ಗೆ ಮತ್ತೆ ಆಘಾತ ಎದುರಾಗಿದೆ. ಕಾಂಗ್ರೆಸ್‌ನ ಮತ್ತೂ  ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಮಾನ್‌ ಸಿಂಗ್ ಚೌಹಾಣ್ ಹಾಗೂ ಸನಾ ಭಾಯ್ ಚೌಧರ್ ಇಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ನಿನ್ನೆಯಿಂದ ಇದುವರೆಗೆ ಬಿಹಾರದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದವರ ಸಂಖ್ಯೆ 9ಕ್ಕೆ ಏರಿದೆ.  ಅದರಲ್ಲಿ ಐವರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ರಮಣ ಬಾಯಿ ವೋರಾ ಅಂಗೀಕರಿಸಿದ್ದಾರೆ.

ನಿನ್ನೆ ಪಿ.ಟಿ ಪಟೇಲ್‌, ಬಲವಂತ್‌ ಸಿಂಗ್‌ ಹಾಗೂ ತೇಜಶ್ರೀ ಪಟೇಲ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.  ಮುಂದಿನ ತಿಂಗಳು ರಾಜ್ಯಸಭೆಯ 9 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಈ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ. ಇದರೊಂದಿಗೆ 182 ಸದಸ್ಯರಿರುವ ಬಿಹಾರ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಬಲ 54ಕ್ಕೆ ಇಳಿದಿದೆ. ಶಂಕರ್‌ ಸಿಂಗ್‌ ವಘೇಲಾ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್‌ನ ಅನೇಕ ಶಾಸಕರು ವಘೇಲಾ ಅವರ ಹಾದಿಯನ್ನೇ ಹಿಡಿದಿದ್ದಾರೆ.

 

 

 

Comments are closed.